ದಾಸಶ್ರೇಷ್ಠರ ಚರಿತೆ ಜನಸಾಮಾನ್ಯರಿಗೆ ತಲುಪಿಸುವುದು ಚಿತ್ರತಂಡದ ಮುಖ್ಯ ಗುರಿ: ಮಧುಸೂಧನ್

ಗಂಗಾವತಿ ಮಾ 22 : ಉತ್ತರ ಕರ್ನಾಟಕ ಭಾಗದಲ್ಲಿ ನಡೆದಾಡಿದ ದಾಸಶ್ರೇಷ್ಠರ ಸಂಸ್ಕೃತಿಯನ್ನು ಜನ ಸಾಮಾನ್ಯರಿಗೆ ತಲುಪಿಸುವುದು ಮುಖ್ಯಗುರಿಯಾಗಿದ್ದು ಲಾಭನಷ್ಟದ ಲೆಕ್ಕಾಚಾರವಿಲ್ಲ ಎಂದು ಜಗನ್ನಾಥದಾಸರು ಚಲನಚಿತ್ರದ ನಿರ್ದೇಶಕ, ನಿರ್ಮಾಪಕ ಮಧುಸೂದನ್ ಹವಲ್ದಾರ್ ತಿಳಿಸಿದರು.
ಅವರು ಗಂಗಾವತಿಯ ಗ್ರಾಮದೇವತೆ ದುರುಗಮ್ಮ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ಆನೆಗೊಂದಿ, ಕನಕಗಿರಿ, ಕಂಪ್ಲಿ ಹಾಗು ಹೊಸಪೇಟೆಯ ತುಂಗಭದ್ರಾ ನದಿಯ ಕೆಲ ಭಾಗಗಳಲ್ಲಿ ಚಿತ್ರಿಸಲಾಗುತ್ತಿದ್ದು, ಉಳಿದಂತೆ ಗ್ರಾಫಿಕ್ಸ್ ಬಳಕೆ ಮಾಡಿ ಅತ್ಯುತ್ತಮ ಚಿತ್ರ ನಿರ್ಮಿಸುವ ಗುರಿ ಹೊಂದಿದ್ದೇವೆ ಎಂದರು.
ಚಿತ್ರ ಚನ್ನಾಗಿ ಮೂಡಿಬರಬೇಕಿದೆ ಗುಣಮಟ್ಟದಲ್ಲಿ ರಾಜೀ ಇಲ್ಲ, ಚಿತ್ರದ ಜತೆಗೆ ಧಾರವಾಹಿಯನ್ನು ಕೂಡಾ ಮಾಡುವ ಯೋಜನೆ ಇದೆ, ಜಗನ್ನಾಥದಾಸರು ಚಿತ್ರದ ನಂತರ ಕನಕದಾಸರು, ಪುರಂದರ ದಾಸರು ಮತ್ತು ಗೋಪಾಲ ದಾಸರ ಚಿತ್ರಗಳನ್ನು ತೆರೆಗೆ ತರುತ್ತಿದ್ದೇವೆ, ಜಗನ್ನಾಥದಾಸರು ಚಿತ್ರದ ಬಜೇಟ್ ರು. ೧.೨೫ ಕೋಟಿ ಇದ್ದು ಅವರು ನಡೆದಾಡಿದ ಪುಣ್ಯ ಭೂಮಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ ಸ್ಥಳೀಯ ಕಲಾವಿದರಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ ಎಂದು ವಿವರಿಸಿದರು.
ಕೊಪ್ಪಳ, ಬಳ್ಳಾರಿ ಹಾಗು ರಾಯಚೂರು ದಾಸರು ನಲೆಸಿದ ಅತ್ಯಂತ ಶ್ರೀಮಂತ ಪರಂಪರೆ, ಸಮಾಜದ ಸ್ವಾಸ್ಥ್ಯ ಹಾಳಗುತ್ತಿರುವ ಇಂಥ ಸನ್ನವೇಶದಲ್ಲಿ ದಾಸರ ಸಂಸ್ಕೃತಿ ಉತ್ತಮ ಸಂದೇಶವಾಗಿದೆ, ಅದನ್ನೇ ನಾವು ಚಲನಚಿತ್ರದ ಮೂಲಕ ಹೇಳುತ್ತಿದ್ದೇವೆ, ೨೫ ವರ್ಷದ ಅನುಭವವನ್ನು ಧಾರೆಎರೆಯುತ್ತಿದ್ದೇನೆ ಪ್ರೇಕ್ಷಕರ ಪ್ರೋತ್ಸಾಹ ನಮಗೆ ಮುಂದಿನ ಚಿತ್ರಗಳಿಗೆ ಉತ್ತೇಜನ ನೀಡಲಿದೆ ಎಂದರು.
ಮಾತಾಂಬುಜ ಮೂವೀಸ್ ಅರ್ಪಿಸುವ ಈ ಚಿತ್ರಕಥೆ ಸಂಭಾಷಣೆಯನ್ನು ಜೆ.ಎಂ. ಪ್ರಹ್ಲಾದ್ ಬರೆದಿದ್ದು, ರವೀಶ್ ಭಟ್ ಹಾಗು ವಿಜಯ ಕೃಷ್ಣ ಸಂಗೀತ ನೀಡಿದ್ದಾರೆ, ವಿಜಯ್ ಛಾಯಾಗ್ರಹಣವಿದ್ದು ಪ್ರಮುಖ ಪಾತ್ರದಲ್ಲಿ ನುರಿತ ಕಲಾವಿದರು ಅಭಿನಯಿಸುತ್ತಿದ್ದು, ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತಿದೆ ಈ ಸಂದರ್ಭದಲ್ಲಿ ಶರದ ದಂಡೀನ ವಕೀಲರು, ಕೊಪ್ಪಳ ಜಿಲ್ಲಾ ಕಲಾವಿದರ ವೇದಿಕೆ ಅಧ್ಯಕ್ಷ ನಾಗರಾಜ್ ಇಂಗಳಗಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಹಂಪಿ ವಿರುಪಾಕ್ಷೇಶ್ವರ ಕಲಾವಿದರ ಸಂಘದ ಅಧ್ಯಕ್ಷ ಗುಂಡಿ ರಮೇಶ್, ವಿಜಯವಾಣಿ ಪತ್ರಿಕೆ ಹಿರಿಯ ಉಪಸಂಪಾದಕ ರಾಘವೇಂದ್ರ ದಂಡೀನ್, ಹಿರಿಯ ಪತ್ರಕರ್ತರಾದ ರಾಮಮೂರ್ತಿ ನವಲಿ, ಕೆ.ನಿಂಗಜ್ಜ, ವೀರಾಪುರ ಕೃಷ್ಣ, ಬಸವರಾಜ್, ಶಿವಕುಮಾರ್ ಕಲಾವಿದರಾದ ಖಾಜಾವಲಿ, ಹನುಮಂತಪ್ಪ ನಾಯಕ, ಯಂಕೋಬ ವಕೀಲರು, ಅಮರೇಶ್ ಇಂಗಳಗಿ ಪಟ್ಟೇದ್, ಪತ್ರಕರ್ತರಾದ ದಶರತ್, ವಸಂತ್, ಶಿವಪ್ಪ ನಾಯಕ, ಕೆ.ಎಂ.ಶರಣಯ್ಯ ಸ್ವಾಮಿ, ರವಿ ಸಾಕ್ಷಿ, ಸಿ ಮಹಾಲಕ್ಷಿö್ಮ ಮತ್ತು ಪಂಪಾಪತಿ ಇಂಗಳಗಿ ಸೇರಿದಂತೆ ಇತರರಿದ್ದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಮದುಸೂಧನ್ ಹವಲ್ದಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.