ದಾಸರ ಪದ ಗುಂಪುಗಾಯನ ಸ್ಪರ್ಧೆ

ಸಂಜೆವಾಣಿ ವಾರ್ತೆ

ಶಿವಮೊಗ್ಗ. ಜು.೨೬;  ಭದ್ರಾವತಿಯ ಕಾರೇಹಳ್ಳಿಯಲ್ಲಿರುವ ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ “ಸದನವಾರು ದಾಸರ ಪದ ಗುಂಪುಗಾಯನ ಸ್ಪರ್ಧೆ”ಯನ್ನು ಏರ್ಪಡಿಸಲಾಯಿತು. ಈ ಸ್ಪರ್ಧೆಗೆ ವಿದೂಷಿ .ಶ್ರೀಮತಿ ಪುಷ್ಪ ಸುಬ್ರಹ್ಮಣ್ಯ  ಶಾಸ್ತಿçÃಯ ಸಂಗೀತ, ಭಾವಗೀತೆ, ಜನಪದಗೀತೆಗಳನ್ನು 50ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದಾರೆ. ಪ್ರಸ್ತುತ ಆಕಾಶವಾಣಿ ಕಲಾವಿದೆಯಾಗಿದ್ದು, 35ವರ್ಷಗಳಿಂದ ಭದ್ರಾವತಿ ಆಕಾಶವಾಣಿಯಲ್ಲಿ ಭಾವಗೀತೆ, ದೇವರನಾಮಗಳನ್ನು ಹಾಡುತ್ತಿದ್ದಾರೆ. ಸಂಘ-ಸAಸ್ಥೆಗಳು ಮತ್ತು ವಿವಿಧ ಶಾಲಾ-ಕಾಲೇಜುಗಳಲ್ಲಿ ದೇವರನಾಮ, ಭಾವಗೀತೆ, ಜನಪದಗೀತೆಗಳ ಸ್ಪರ್ಧೆಯ ತೀರ್ಪುಗಾರರಾಗಿ ಅನುಭವವನ್ನು ಹೊಂದಿರುತ್ತಾರೆ. ಇವರು ನಮ್ಮ ಶಾಲೆಯ ಸದನವಾರು ಗುಂಪುಗಾಯನ ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ್ದರು. ಸ್ಪರ್ಧೆಯು ಜ್ಯೋತಿ ಬೆಳಗುವುದರೊಂದಿಗೆ ಪ್ರಾರಂಭವಾಯಿತು. ಗುಂಪುಗಾಯನ ಸ್ಪರ್ಧೆಯ ಮೇಲ್ವಿಚಾರಕಿಯಾಗಿ ಸಹ ಶಿಕ್ಷಕಿ ಶ್ರೀಮತಿ ಪ್ರಭಾವತಿರವರು ಕಾರ್ಯನಿರ್ವಹಿಸಿದರು. ಈ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ನಾಲ್ಕು ಸದನಗಳಾದ ಒಗ್ಗಟ್ಟು ಸದನ, ಶಾಂತಿ ಸದನ, ಶಕ್ತಿ ಸದನ, ಧರ‍್ಯ ಸದನ(uಠಿsಛಿ) ಗಳು ಭಾಗವಹಿಸಿದ್ದವು. ಪ್ರತೀ ಸದನದಲ್ಲಿ 7 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಶಕ್ತಿ ಸದನವು ಮೊದಲನೇ ಬಹುಮಾನವನ್ನು ಪಡೆಯಿತು. ಧರ‍್ಯ ಸದನವು ಎರಡನೇ ಬಹುಮಾನವನ್ನು ಪಡೆಯಿತು. ಶಾಂತಿ ಸದನವು ಮೂರನೇ ಬಹುಮಾನವನ್ನು ಪಡೆಯಿತು. ಮೊದಲನೇ ಹಾಗೂ ಎರಡನೇ ಬಹುಮಾನ ಪಡೆದ ಸದನಗಳ ವಿದ್ಯಾರ್ಥಿಗಳಿಗೆ ತೀರ್ಪುಗಾರರಾಗಿ ಆಗಮಿಸಿದ್ದ ವಿದೂಷಿ ಶ್ರೀಮತಿ ಪುಷ್ಪ ಸುಬ್ರಹ್ಮಣ್ಯರವರು, ಬಿಜಿಎಸ್ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಡಾ. ಅಮುದಾ ಸಿ ಮುನಿರಾಜ್ , ಉಪಪ್ರಾಂಶುಪಾಲರಾದ  ವೀರರಾಜೇಂದ್ರ ಸ್ವಾಮಿ ಎ ಎಮ್  ಹಾಗೂ ಮುಖ್ಯೋಪಾಧ್ಯಾಯಿನಿಯವರಾದ ದಿವ್ಯ ಕೆ ಎನ್  ಬಹುಮಾನವನ್ನು ವಿತರಿಸುವುದರೊಂದಿಗೆ ಅಭಿನಂದಿಸಿದರು. ಸ್ಪರ್ಧೆಯ ಕೊನೆಯಲ್ಲಿ ವಿದೂಷಿ ಶ್ರೀಮತಿ ಪುಷ್ಪ ಸುಬ್ರಹ್ಮಣ್ಯ ದೇವರನಾಮವನ್ನು ಹಾಡುವುದರ ಮೂಲಕ ಎಲ್ಲರನ್ನು ರಂಜಿಸಿದರು. ಈ ಸ್ಪರ್ಧೆಗೆ ಶಾಲಾ ಆಡಳಿತ ಮಂಡಳಿಯವರು, ಶಾಲಾ ಶೈಕ್ಷಣಿಕ ಸಲಹೆಗಾರರು, ಶಾಲಾ ಆಡಳಿತಾಧಿಕಾರಿಗಳಾದ  ಜಗದೀಶ ಬಿ  ಪ್ರೋತ್ಸಾಹವನ್ನು ನೀಡಿದರು.