ದಾಸರಹಳ್ಳಿ ಕಾರ್ಮಿಕ ಭವನ ಕೋವಿಡ್ ಕೇರ್ ಕೇಂದ್ರವಾಗಿ ಪರಿವರ್ತನೆ

ಬೆಂಗಳೂರು, ಏ. ೨೬- ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾರ್ಮಿಕ ಭವನ ಆವರಣದಲ್ಲಿ ೧೫೦ ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ದಾಸರಹಳ್ಳಿ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ, ಜಂಟಿ ಆಯುಕ್ತ ನರಸಿಂಹಮೂರ್ತಿ, ಮುಖ್ಯ ಆರೋಗ್ಯಾಧಿಕಾರಿ ಲೋಕೇಶ್, ಸುರೇಶ್ ರುದ್ರಪ್ಪ,ನೋಡಲ್ ಅಧಿಕಾರಿ ರಾಜು ಕೋವಿಡ್ ಕೇರ್ ಸೆಂಟರ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಸದ್ಯದಲ್ಲೇ ಕೊರೊನಾ ಪಾಸಿಟೀವ್ ಲಕ್ಷಣಗಳುಳ್ಳ ರೋಗಿಗಳ ಸೇವೆಗೆ ಈ ಭವನ ಶುರುವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಉನ್ನತ ಅಧಿಕಾರಿಗಳು, ವೈದ್ಯರ ತಂಡ ಇದ್ದು, ಇದಕ್ಕೆ ಪೂರಕವಾಗಿ ಆಶಾ ಕಾರ್ಯಕರ್ತೆಯರು,ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಕೋವಿಡ್ ವಾರ್ ರೂಮ್ ನ ಸಿಬ್ಬಂದಿಗಳು ಹಗಲಿರುಳೆನ್ನದೆ ಕಾರ್ಯನಿರ್ವಹಿಸಲಿದ್ದಾರೆ ಎಂದಿದ್ದಾರೆ.