ದಾಸರಹಳ್ಳಿಯಲ್ಲಿ ಕೋವಿಡ್ ಕೇರ್ ಪರಿಶೀಲನೆ

ಬೆಂಗಳೂರು, ಏ ೨೫- ನಗರದ ದಾಸರಹಳ್ಳಿ ಕ್ಷೇತ್ರದ ಕಾರ್ಮಿಕ ಭವನ ಆವರಣದಲ್ಲಿ ೧೫೦ ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ.

ಶಾಸಕರಾದ ಆರ್ ಮಂಜುನಾಥ್ ಹಾಗೂ ದಾಸರಹಳ್ಳಿ ವಲಯ ಕೋವಿಡ್ ಉಸ್ತುವಾರಿ ಅಧಿಕಾರಿ ಪಿ ಸಿ ಜಾಫರ್, ವಿಶೇಷ ಆಯುಕ್ತರಾದ ರವೀಂದ್ರ, ಜಂಟಿ ಆಯುಕ್ತರಾದ ನರಸಿಂಹಮೂರ್ತಿ, ಮುಖ್ಯ ಆರೋಗ್ಯಾಧಿಕಾರಿ ಲೋಕೇಶ್, ಸುರೇಶ್ ರುದ್ರಪ್ಪ,ನೋಡಲ್ ಅಧಿಕಾರಿ ರಾಜು ಖುದ್ದು ಸ್ಥಳ ಪರಿವೀಕ್ಷಣೆ ನಡೆಸಿದರು. ಹಾಗೂ ಇದೇ ಸಂದರ್ಭದಲ್ಲಿ ಸಪ್ತಗಿರಿ ಆಸ್ಪತ್ರೆ ಹಾಗೂ ಪ್ರಕ್ರಿಯೆ ಆಸ್ಪತ್ರೆಗಳ ವಾಸ್ತವಸ್ಥಿತಿಯನ್ನು ಖುದ್ದು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಸದ್ಯದಲ್ಲೇ ಸಾರ್ವಜನಿಕ ಸೇವೆಗೆ ಇದು ಕಾರ್ಯಾರಂಭ ಮಾಡಲಿದ್ದು, ನುರಿತ ವೈದ್ಯರನ್ನು ನೇಮಕ ಮಾಡಬೇಕು ಜನರಿಗೆ ಉತ್ತಮ ಗುಣಮಟ್ಟದ ಆಹಾರ, ಚಿಕಿತ್ಸೆ ದೊರೆಯುವ ಮೂಲಕ ಕೊರೋನ ಮಹಾಮಾರಿಗೆ ಒಳಗಾಗಿರುವ ರೋಗಿಗಳನ್ನು ಶೀಘ್ರ ಗುಣಪಡಿಸಿ ಕಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕ್ಷೇತ್ರದಲ್ಲಿ ಉನ್ನತ ಅಧಿಕಾರಿಗಳು, ವೈದ್ಯರ ತಂಡ ಇದ್ದು, ಇದಕ್ಕೆ ಪೂರಕವಾಗಿ ಆಶಾ ಕಾರ್ಯಕರ್ತೆಯರು,ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಕೋವಿಡ್ ವಾರ್ ರೂಮ್ ನ ಸಿಬ್ಬಂದಿಗಳು ಹಗಲಿರುಳೆನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಷೇತ್ರದ ಜನರ ಆರೋಗ್ಯ ಹಾಗೂ ಜೀವ ಉಳಿಸುವ ಕಾರ್ಯ ನಮ್ಮ ಮೊದಲ ಆದ್ಯತೆಯಾಗಬೇಕು ಎಂದರು.