ದಾಸರಲ್ಲಿ ಶ್ರೇಷ್ಠ ಕನಕದಾಸರು: ಶಾಂತವೀರ ಶಿವಾಚಾರ್ಯರು

ಮಾದನಹಿಪ್ಪರಗಿ:ನ.23: ದಾಸರಲ್ಲಿ ಶ್ರೇಷ್ಟ ದಾಸರು ಎನಿಸಿಕೊಂಡವರು ಕನಕದಾಸರು. ಕನಕದಾಸರು ವಿಜಯನಗರ ಸಾಮ್ರಾಜ್ಯದಲ್ಲಿ ಒಂದು ಪ್ರಾಂತ್ಯಕ್ಕೆ ದಂಡನಾಯಕನಾಗಿದ್ದರು. ಕನಕದಾಸರಿಗೆ ನಾಲ್ಕು ಹೆಸರುಗಳಿದ್ದವು ತಿಮ್ಮಪ್ಪ, ತಿಮ್ಮಪ್ಪ ನಾಯಕ, ಕನಕನಾಯಕ ಮತ್ತು ಕನಕದಾಸರು ಎಂದು. ಈ ಹೆಸರು ಬರಲು ಕಾರಣ ಅವರ ಆಢಳಿತದಲ್ಲಿ ಅವರಿಗೆ ದೊರೆತಂತಹ ಬಂಗಾರವನ್ನು ತನ್ನ ಪ್ರಜೆಗಳಿಗೆ ದಾನ ನೀಡಿದರು. ಇದರಿಂದಾಗಿಯೇ ಜನರು ಕನಕನಾಯಕನೆಂದು ಕರೆದರು ಎಂದು ಹಿರೇಮಠದ ಶಾಂತವೀರ ಶಿವಾಚಾರ್ಯರು ನುಡಿದರು.

ಇಂದು ಗ್ರಾಮದ ನಡೆದ ಕನಕದಾಸರ ಜಯಂತಿಯಲ್ಲಿ ಮಾತನಾಡಿದರು. ಕನಕದಾಸ ಜಯಂತೋತ್ಸವ ಸಮಿತಿಯವರು ಹಮ್ಮಿಕೊಂಡಿದ್ದ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ 9 ಗಂಟೆಗೆ ಕನಕದಾಸರ ಭಾವಚಿತ್ರದ ಮೆರವಣಿಗೆಯನ್ನು ಬೀರಲಿಂಗೇಶ್ವರ ಗುಡಿಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೊರಟಿತು ನಂತರ ಕನಕ ವೃತ್ತದಲ್ಲಿ ಶಾಂತವೀರ ಶಿವಾಚಾರ್ಯರು ಕನಕ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಧರ್ಮಣ್ಣ ಕೌಲಗಿ, ಶರಣಬಸಪ್ಪ ಜಿಡ್ಡಿಮನಿ, ಶ್ರೀಶೈಲ ಸಾಲಿ, ಶಾಂತಪ್ಪ ಬುರುಡ, ಪ್ರಮುಖರಾದ ಮಲ್ಲಿನಾಥ ದುದ್ದಗಿ, ಅಪ್ಪಾಶಾ ಮೇತ್ರೆ, ಶರಣಬಸಪ್ಪ ಖ್ಯಾಮು, ಭೂತಾಳಿ ಹತ್ತಿ, ಬೀರಪ್ಪ ವಗ್ಗಿ, ಶರಣಬಸಪ್ಪ ಖ್ಯಾಮು, ಶಿವಪ್ಪ ಕಾರಬಾರಿ, ರಾಹುಲ ಜಿಡ್ಡಿಮನಿ, ರಾಘವೇಂದ್ರ ಜಿಡ್ಡಮನಿ, ಸಂತೋಷ ವಗ್ಗಿ, ಮಲ್ಲಿನಾಥ ಖ್ಯಾಮು, ಮಲ್ಲಪ್ಪ ಶಿವಲಿಂಗಪ್ಪ ಕೇರೂರ ಮುಂತಾದವರಿದ್ದರು.