ದಾಸರನಾಗೇನಹಳ್ಳಿಯಲ್ಲಿ: ಕರ್ನಾಟಕ ರಾಜೋತ್ಸವ

ಬಳ್ಳಾರಿ ನ 02 : ತಾಲೂಕಿನ ದಾಸರ ನಾಗೇನಹಳ್ಳಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಶ್ರೀ ವಿನಾಯಕ ಸೇವಾ ಟ್ರಸ್ಟ್‍ನಿಂದ ನಿನ್ನೆ ಕರ್ನಾಟಕ ರಾಜೋತ್ಸವ ಹಮ್ಮಿಕೊಂಡಿತ್ತು.
ಕರವೇ ಅಧ್ಯಕ್ಷಎಂ ಶಾಂತಮೂರ್ತಿಸ್ವಮಿರವರು ಮತ್ತು ಎಸ್.ವಿ.ಎಸ್. ಟ್ರಸ್ಟಿನ ಮಾನೇಜಿಂಗ್ ಟ್ರಸ್ಟಿ ಕೆ. ಜಗನ್ನಾಥ ರವರು ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ನಂತರ ಗ್ರಾಮದ ಎಸ್ ಎಸ್ ಎಲ್ ಸಿ ಪರೀಕ್ಷೇಯಲ್ಲಿ 530 ಅಂಕಗಳೋಂದಿಗೆ ಉತ್ತಿರ್ಣರಾಗಿ ಶಾಲೆಗೆ ಗ್ರಾಮಕ್ಕೆ ಪ್ರಥಮ ಸ್ಥಾನಗಳಿಸಿದ ಕುಮಾರಿ ಸಿದ್ದಲಿಂಗಮ್ಮ ಧ್ವಜಾರೋಣವನ್ನು ನೆರೆವೇರಿಸಿದರು. ಕರವೇ ಗೌರವ ಅಧ್ಯಾಕ್ಷ ಕೆ ಹೆಚ್ ಮಲ್ಲಿಕಾರ್ಜುನ ಅವರು ಮಾತನಾಡಿ ನಾಡು ನುಡಿ ಪ್ರಗತಿಗೆ ಶ್ರಮಿಸಿದ ಗಣ್ಯಮಾನ್ಯರಿಗೆ ಗೌರವ ನಮನ ಸಲ್ಲಿಸಿದರು.
ಕರವೇ ಪದಾದಿಕಾರಿಗಳಾದ ಕೆ.ಗದಿಲಿಂಗಪ್ಪ, , ಪಿ ಜಿ ಮಲ್ಲಿಕಾರ್ಜುನ, ಕೆ ಮಾರೆಪ್ಪ, ಕೆ.ಜಿ ಗಾದಿಲಿಂಗಪ್ಪ, ಟಿ ವಿರೇಶ್, ಟಿ ಕೋಮಾರಿ, ನಾಗರಾಜ ಎಂ, ಎಲ್ಲಾರು ಸೇರಿ ಧ್ವಜಾರೋಣವನ್ನು ನೆರೆವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕಿಶೋರ್ ಪ್ರರ್ಥನೆಯನ್ನು ವಿಧ್ಯಾರ್ಥಿನಿ ಅನ್ನಪೂರ್ಣ ಅಂಕಿತ ತಂಡದವರು ಮತ್ತು ವಂದನಾರ್ಪಣೆಯನ್ನು ವಿನಯ್, ನಿರ್ವಹಿಸಿದರು.