ದಾವಣಗೆರೆ.ಜೂ.೨೩: ದಾವಣಗೆರೆ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ವಿಶೇಷ ಉಪನ್ಯಾಸ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರುಗಳಾದ ಪ್ರೊ. ಶೌಕತ್ ಅಜೀಂ ಮತ್ತು ಡಾ. ಹನುಮೇಗೌಡ ಸಂಶೋಧನಾ ವಿದ್ಯಾರ್ಥಿಗಳಾದ ವಿ.ಚೌಡಪ್ಪ. ಮತ್ತು ಹೆಚ್. ವಾಣಿ ಅವರು ರಚಿಸಿರುವ ‘ಅಂಚೀಕೃತ ಗುಂಪುಗಳ ಸಮಾಜಶಾಸ್ತ್ರ ಹಾಗೂ ವಿ. ಚೌಡಪ್ಪ ಮತ್ತು ವಿ.ಬಿ. ಬಸವೇಶ್ ರಚಿಸಿರುವ ‘ಭಾರತದಲ್ಲಿ ನಗರ ಜೀವನದ ಸಮಾಜಶಾಸ್ತ್ರ ಎಂಬ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಹುಚ್ಚೇಗೌಡ, ಸಹಾಯಕ ಪ್ರಾಧ್ಯಾಪಕರಾದ ಡಾ. ಎಸ್. ಆರ್. ಪ್ರಕಾಶ್, ಡಾ. ಕೆ.ಜ್ಯೋತಿ, ಸಹಾಯಕ ಬೋಧಕ ಡಾ. ರಾಮಚಂದ್ರಪ್ಪ, ಲೇಖಕರಾದ ವಿ.ಚೌಡಪ್ಪ ವಿ ಹಾಗೂ ಸಂಶೋಧನಾ ವಿದ್ಯಾರ್ಥಿ ಎನ್. ಸುಮಯ್ಯ ಭಾನು ಉಪಸ್ಥಿತರಿದ್ದರು.