ದಾವಿಕ್ಸ್ ಟೆಕ್ ಪ್ರೈವೇಟ್ ಲಿಮಿಟೆಡ್ ನಿಂದ ಪತ್ರಿಕೆಗಳನ್ನು ಬಲಪಡಿಸಲು ನಮ್ ನ್ಯೂಸ್ ಸಾಫ್ಟ್‌ವೇರ್ ಅಭಿವೃದ್ಧಿ

ಸಂಜೆವಾಣಿ ವಾರ್ತೆ

ದಾವಣಗೆರೆ.ಜೂ.೧೦: ದಾವಿಕ್ಸ್ ಟೆಕ್ ಪ್ರೈವೇಟ್ ಲಿಮಿಟೆಡ್ ಸ್ಥಳೀಯ ಮತ್ತು ಪ್ರಾದೇಶಿಕ ಪತ್ರಿಕೆಗಳನ್ನು ಬಲಪಡಿಸಲು ನಮ್ ನ್ಯೂಸ್ (www.namnews.in) ಎಂಬ ಅತ್ಯಾಧುನಿಕ ಸಾಫ್ಟ್‌ವೇರ್ ಪ್ಲಾಟ್ ಫಾರ್ಮ್ ಆಸ್ ಎ ಸರ್ವಿಸ್ (SaaS) ಅನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ದಾವಿಕ್ಸ್  ಸದಸ್ಯ ಅಭಿಷೇಕ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದು ವಿಶೇಷವಾಗಿ ಸ್ಥಳೀಯ ಮತ್ತು ಪ್ರಾದೇಶಿಕ ಪತ್ರಿಕೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ನಮ್‌ ನ್ಯೂಸ್ ಪತ್ರಿಕೆಗಳು  ವಿಷಯವನ್ನು ಪ್ರಕಟಿಸುವುದು. ಡಿಜಿಟಲ್ ಹಾಜರಾತಿ ಸ್ಥಾಪಿಸುವುದು. ಬ್ರಾಂಡ್ ಐಡೆಂಟಿಟಿಯನ್ನು ವೃದ್ಧಿಸುವುದು ಮತ್ತು ಜಾಹೀರಾತುಗಳ ಮೂಲಕ ಪ್ಯಾಸಿವ್ ಆದಾಯವನ್ನು ಸೃಷ್ಟಿಸುವುದು ಸೇರಿದಂತೆ ಸಂಪೂರ್ಣ ಪರಿಹಾರ ಒದಗಿಸುತ್ತದೆ ಎಂದು ಮಾಹಿತಿ ನೀಡಿದರು.ಇದು ಕೇವಲ ಉಪಕರಣವಲ್ಲ. ಇದು ಸ್ಥಳೀಯ ಪತ್ರಿಕೆಗಳನ್ನು ಡಿಜಿಟಲ್ ಯುಗದಲ್ಲಿ ಅರಳಲು ಸಹಾಯ ಮಾಡುವ ಸಮಗ್ರ ಪರಿಹಾರವಾಗಿದೆ. ಸಮುದಾಯ ಪತ್ರಿಕೋದ್ಯಮದ ಶಕ್ತಿಗೆ ಮತ್ತು ಸ್ಥಳೀಯ ಸುದ್ದಿಗಳ ಮಹತ್ವಕ್ಕೆ ನಂಬಿಕೆ ಇಡಲಾಗುತ್ತಿದೆ. ಸ್ಥಳೀಯ ಮಾಧ್ಯಮದ ಪರಿವರ್ತನೆಗೆ ನಮ್ಮ ಪ್ರಯತ್ನವನ್ನು ಮುಂದುವರಿಸುವಲ್ಲಿ ನಿರ್ಣಾಯಕವಾಗಿದೆ ಎಂದು ಹೇಳಿದರು.ಸ್ಥಳೀಯ ಪತ್ರಿಕೋದ್ಯಮವನ್ನು ಶಕ್ತಿಪಡಿಸಲು ಮತ್ತು ಪ್ರಾದೇಶಿಕ ಸುದ್ದಿಗಳಿಗೆ ದೃಢವಾದ ಡಿಜಿಟಲ್ ಪರಿಸರ ಬೆಳೆಸಲು ನಿಮಗೆ ಆತಿಥ್ಯ ವಹಿಸಲು ನಿರೀಕ್ಷಿಸುತ್ತೇವೆ ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ರಾಜೇಶ್ವರಿ ಕೇಶವ್, ಅಭಿಷೇಕ್, ಗುರುದತ್ತ ಇತರರು ಇದ್ದರು.