ದಾವಲ್ ಸಾಬ ಕೊವಿಡ್‌ಗೆ ಬಲಿ

ಲಿಂಗಸಗೂರು.ಜೂ.೦೫-ತಾಲೂಕಿನ ನಾಗರಾಳ ಗ್ರಾಮದ ರಾಜ್ಯಮಟ್ಟದ ಗೋಲ್ಡ ಮೆಡಲ್ ವಿಜೇತ ಚಾಲಕರಾಗಿ ಇತ್ತೀಚೆಗೆ ನಿವೃತ್ತಿಯಾಗಿದ್ದ ರಸ್ತೆ ಸಾರಿಗೆಯ ಸಂಸ್ಥೆಯ ಚಾಲಕ ದಾವಲಸಾಬ್ ರವರು ಕೊವಿಡ್‌ಗೆ ಬಲಿಯಾಗಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಉತ್ತಮ ಚಾಲಕ ಸೇವೆ ಸಲ್ಲಿಸುತ್ತಿದ್ದ ಇವರಿಗೆ ಧರ್ಮಸಿಂಗ್ ರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇವರಿಗೆ ಉತ್ತಮ ಚಾಲಕನೆಂದು ರಾಜ್ಯಮಟ್ಟದ ಪ್ರಶಸ್ತಿ ಗೋಲ್ಡ ಮೆಡಲನ್ನು ಮುಖ್ಯಮಂತ್ರಿಗಳಿಂದ ಪಡೆದಿದರು ಅಲ್ಲದೆ ಬೆಳ್ಳಿ ಪದಕವನ್ನು ಪಡೆದಿದ್ದರು ಇತ್ತೀಚೆಗೆ ವಯೋನಿವೃತ್ತಿಯಾಗಿದ್ದ ಇವರು ತಾಲೂಕಿನ ನಾಗರಾಳ ಗ್ರಾಮದಲ್ಲಿ ವಾಸವಾಗಿದ್ದರು.
ಅವರಿಗೆ ಇತ್ತೀಚೆಗೆ ಕೊವಿಡ್ ಕಾಣಿಸಿಕೊಂಡ ಪ್ರಯುಕ್ತವಾಗಿ ಲಿಂಗಸಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು ರೋಗ ಉಲ್ಬಣಗೊಂಡ ನಂತರ ರಾಯಚೂರಿಗೆ ಕಳುಹಿಸಲಾಗಿತ್ತು ಚಿಕಿತ್ಸೆಗೆ ಸ್ಪಂದಿಸದೆ ಇಂದು ನಿಧನರಾಗಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.
ತಾಲೂಕಾ ಅಮರೇಶ್ವರ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷರಾದ ನಿರುಪಾದಿ ಕವಿಗಳು ಇವರ ಸಹೋದರರಾಗಿದ್ದು ಒಬ್ಬಮಗ ಇಬ್ಬರು ಹೆಣ್ಣುಮಕ್ಕಳು ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.