ದಾವಲಬಿ ನದಾಫ್‍ಗೆ ಪಿಎಚ್‍ಡಿ

ವಿಜಯಪುರ:ಮಾ.3: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ದಾವಲಬಿ ನದಾಫ ಅವರು ಸಲ್ಲಿಸಿದ್ದ “ಎ ಕಂಪ್ಯಾರೆಟಿವ್ ಸ್ಟಡಿ ಆಫ್ ಎಜ್ಯುಕೇಶನಲ್ ಕಾಂಟ್ರಿಬ್ಯುಶನ್ಸ್ ಆಫ್ ಸಾವಿತ್ರಿಬಾಯಿ ಫುಲೆ ಆ್ಯಂಡ್ ಫಾತಿಮಾ ಶೇಖ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‍ಡಿ ಪದವಿ ನೀಡಿದೆ.
ದಾವಲಬಿ ನದಾಫ ಅವರು ಶಿಕ್ಷಣ ಅಧ್ಯಯನ ವಿಭಾಗದ ಡಾ. ಪ್ರಕಾಶ ಸಣ್ಣಕ್ಕನವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ದಾವಲಬಿ ನದಾಫ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ. ಚಂದ್ರಶೇಕರ ಅಭಿನಂದಿಸಿದ್ದಾರೆ.