ದಾವಣಗೆರೆ 529 ಕೊರೊನಾ ಪಾಸಿಟಿವ್,4 ಸಾವು

ದಾವಣಗೆರೆ:ಜೂ5:ಜಿಲ್ಲೆಯಲ್ಲಿಂದು 529 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 511 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 4 ಮಂದಿ ಸಾವನ್ನಪ್ಪಿದ್ದಾರೆ.

ದಾವಣಗೆರೆ 225 , ಹರಿಹರ 92, ಜಗಳೂರು 19, ಚನ್ನಗಿರಿ 97, ಹೊನ್ನಾಳಿ 75 , ಹೊರ ಜಿಲ್ಲೆಯಿಂದ ಬಂದ 21 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 44815 ಕ್ಕೆ ಏರಿಕೆಯಾಗಿದೆ. ಇಂದು 418 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 40292 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 385 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 4138 ಸಕ್ರಿಯ ಕೇಸ್ ಗಳಿವೆ. ಹರಿಹರದ ವಿದ್ಯಾನಗರದ 60 ವರ್ಷ ವೃದ್ಧ, ಹೊನ್ನಾಳಿಯ 33 ವರ್ಷದ ಯುವತಿ, 60 ವರ್ಷದ ವೃದ್ಧೆ, ವಿಜಯನಗರದ ಜಿಲ್ಲೆಯ 70 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.