ದಾವಣಗೆರೆ: 300 ಜನರಲ್ಲಿ ಸೋಂಕು; 1 ಸಾವು

ದಾವಣಗೆರೆ ಏ 27 : ಜಿಲ್ಲೆಯಲ್ಲಿ ಇಂದು ದಾಖಲೆ ಪ್ರಮಾಣದಲ್ಲಿ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು,  ಇಂದು ಒಂದೇ ದಿನ 300 ಜನರಲ್ಲಿ ಸೋಂಕು ಪತ್ತೆಯಾಗಿದೆ.  ಈ ಮೂಲಕ ಸೋಂಕಿತರ ಸಂಖ್ಯೆ 25,260ಕ್ಕೆ ಏರಿಕೆಯಾಗಿದೆ. ಒಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಇಂದು 178  ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವೆಗೆ ಒಟ್ಟು 23,405 ಮಂದಿ ಗುಣಮುಖರಾಗಿದ್ಧಾರೆ.  ಜಿಲ್ಲೆಯಲ್ಲಿ ಇದುವರೆಗೆ 268 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 1587 ಮಂದಿ ಸಕ್ರಿಯ ಕೇಸ್ ಗಳಿವೆ. ದಾವಣಗೆರೆ 200, ಹರಿಹರ 27, ಜಗಳೂರು 20, ಚನ್ನಗಿರಿ 12, ಹೊನ್ನಾಳಿ 30, ಹೊರ ಜಿಲ್ಲೆಯಿಂದ 11 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಮೃತಪಟ್ಟ ವ್ಯಕ್ತಿ 47 ವರ್ಷದ ಪುರುಷನಾಗಿದ್ದು, ಜಗಳೂರಿನ ಕೆಇಬಿ ಸರ್ಕಲ್ ನಿವಾಸಿಯಾಗಿದ್ದಾರೆ.