ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್‌ ಚುನಾವಣೆ ;  ಅವಿರೋಧ ಆಯ್ಕೆ

ಸಂಜೆವಾಣಿ ವಾರ್ತೆ
ದಾವಣಗೆರೆ,ಜು.18;  ಎನ್.ಎ. ಮುರುಗೇಶ್ ನೇತೃತ್ವದಲ್ಲಿ ನಡೆದದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಯ ಚುನಾವಣೆಯಲ್ಲಿ  ಎಲ್ಲಾ 15 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.ಬ್ಯಾಂಕಿನ ಹಾಲಿ ಉಪಾಧ್ಯಕ್ಷ ಕಿರುವಾಡಿ ವಿ. ಸೋಮಶೇಖರ್, ಶ್ರೀಮತಿ ಪಿ.ಜಯಮ್ಮ, ಕೆ. ಶಂಕರ್ ರಾವ್, ಎಸ್.ಕೆ. ಪ್ರಭು ಪ್ರಸಾದ್, ಕೆ.ಎಂ. ಜ್ಯೋತಿಪ್ರಕಾಶ್‌, ಎ. ಕೊಟ್ರೇಶ್, ಬಿ.ಚಿದಾನಂದಪ್ಪ, ಆರ್. ವಿಶಾಲ್ ಕುಮಾರ್, ಪಿ.ಹೆಚ್.ವೆಂಕಪ್ಪ,ಎ.ಹೆಚ್ ಕುಬೇರಪ್ಪ,ಬಿ.ನಾಗೇಂದ್ರಚಾರಿ,ಶ್ರೀಮತಿ ಉಮಾ,ಶ್ರೀಮತಿ ಕೆ.ಪಿ. ಅನಿತಾ ಹಾಗೂ ಶ್ರೀಮತಿ ಅನುಪಾ ವೀರೇಂದ್ರ ಸ್ವಾಮಿ ಅವರುಗಳುಅವಿರೋಧವಾಗಿ ಚುನಾಯಿತಗೊಂಡಿದ್ದಾರೆ. ಆಯ್ಕೆಯಾಗಿರುವ ಹದಿನೈದು ಜನರಲ್ಲಿ ನಾಲ್ವರು ಹೊಸಬರಾಗಿದ್ದಾರೆ. ಬಿ.ಚಿದಾನಂದಪ್ಪ,ಆರ್ ವಿಶಾಲ್ ಕುಮಾರ್, ಶ್ರೀಮತಿ ಕೆ.ಪಿ ಅನಿತಾ ಹಾಗೂ ಶ್ರೀಮತಿ ಅನುಪಾ ವೀರೇಂದ್ರ ಸ್ವಾಮಿಅವರುಗಳು ಇದೇ ಪ್ರಥಮ ಬಾರಿಗೆ ನಿರ್ದೇಶಕರುಗಳಾಗಿದ್ದಾರೆ. ಬ್ಯಾಂಕಿನ ಆಡಳಿತ ಮಂಡಳಿಯ 15 ಸ್ಥಾನಕ್ಕೆ ಆಯ್ಕೆ ಬಯಸಿ ಒಟ್ಟು 22 ಜನರು ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ ಟಿ.ಎಂ. ಪಾಲಾಕ್ಷ, ನಂಜುಂಡ, ಶಿವಾಜಿರಾವ್ ಮತ್ತು ಆರಾಧ್ಯಮಠ ಅವರುಗಳ ನಾಮಪತ್ರಗಳು ತಿರಸ್ಕೃತಗೊಂಡರೆ,ಜಯಪ್ರಕಾಶ್ ಗೌಡ, ಹೆಚ್.ಎಂ. ನಾಗರಾಜ್‌ ಹಾಗೂ ವಿನಾಯಕ ಅವರುಗಳು ತಮ್ಮ ಉಮೇದುವಾರಿಕೆ ಅರ್ಜಿ ಹಿಂದಕ್ಕೆ ಪಡೆದರು.ಈ ಕಾರಣದಿಂದ ಕಣದಲ್ಲಿ ಉಳಿದ 15 ಜನರ ಅವಿರೋಧ ಆಯ್ಕೆಗೆ ಕಾರಣವಾಯಿತು.ಸಹಕಾರ ಸಂಘಗಳ ಸಹಾಯಕ ನಿಬಂಧಕರ ದಾವಣಗೆರೆ ಉಪವಿಭಾಗದ ಹಿರಿಯ ನಿರೀಕ್ಷಕ ಎಲ್.ಸತೀಶ್‌ ನಾಯಕ್‌  ಚುನಾವಣಾಧಿಕಾರಿಯಾಗಿಕಾರ್ಯ ನಿರ್ವಹಿಸಿದರು.