ದಾವಣಗೆರೆ ಸಮಾವೇಶ ಬಿಜೆಪಿ ಭವಿಷ್ಯದ ದಿಗ್ವಿಜಯದ ಸಂಕೇತ

ದಾವಣಗೆರೆ, ಮಾ. 26: ದಾವಣಗೆರೆಯ ವಿಜಯಸಂಕಲ್ಪ ಯಾತ್ರೆಯ ಸಮಾವೇಶ  ಭಾಜಪದ  ಭವಿಷ್ಯದ ದಿಗ್ವಿಜಯದ  ಸಂಕೇತ ಎಂದು   ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ದಾವಣಗೆರೆಯಲ್ಲಿ ವಿಜಯಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ  ಗೆಲ್ಲಬೇಕು. ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಜನ ಕಲ್ಯಾಣದ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಜನಸ್ತೋಮದಿಂದ ದಿಗ್ವಿಜಯದ ಸೂಚನೆ ಸಿಕ್ಕಿದೆ ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಗತ್ತು ಕಂಡ ಶ್ರೇಷ್ಠ ನಾಯಕರು. ವಿಶ್ವದ ದೊಡ್ಡಣ್ಣ ಎನಿಸಿದ ಅಮೆರಿಕಾ ಕೂಡ ಇವರಿಗೆ ತಲೆ ಬಾಗಿದೆ. ಕೋವಿಡ್ ಸಂದರ್ಭದಲ್ಲಿ ವಿಶ್ವದ ಶ್ರೀಮಂತ ರಾಷ್ಟಗಳು ಶಕ್ತಿಗುಂದಿದಾಗ, ನಮ್ಮ ದೇಶದ ಆರ್ಥಿಕತೆಯನ್ನು ಸುಸ್ಥಿರ ವಾಗಿರಿಸಿದವರು. ಪಕ್ಕದ ಪಾಕಿಸ್ತಾನದ ಜನರು ಕೂಡ ಮೋದಿಯಂತಹ ನಾಯಕ ಬೇಕು ಎನ್ನುತ್ತಿದ್ದಾರೆ ಎಂದರು. ಆದರೆ ರಾಹುಲ್‌ ವಿದೇಶಕ್ಕೆ ಹೋಗಿ ಮೋದಿಯವರು ಹಾಗೂ ಪ್ರಜಾಪ್ರಭುತ್ವವನ್ನು ಹೀಯಾಳಿಸಿದ್ದಾರೆ.  ದೇಶದ ಜನರ ಬಗ್ಗೆ ಅವರಿಗೆ ಕಾಳಜಿಯಿಲ್ಲ. ದೇಶದ ಬಗ್ಗೆ ಅವಹೇಳನ ಮಾಡುವವರು ನಮಗೆ ಬೇಕೆ ಎಂಬ ಬಗ್ಗೆ ತೀರ್ಮಾನ ಮಾಡಬೇಕು ಎಂದರು.