ದಾವಣಗೆರೆ ಶಂಕರಮಠದಲ್ಲಿ ಚಾತುರ್ಮಾಸ ಪೂಜೆ ಆರಂಭ

ದಾವಣಗೆರೆ.ಜು.4: ಶ್ರೀ ಶಂಕರಾಚಾರ್ಯ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಹಿರಿಯ ಜಗದ್ಗುರುಗಳಾದ ಶ್ರೀ ಡಾ. ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮಿಗಳು ಲೋಕಕಲ್ಯಾಣಾರ್ಥ  ವ್ಯಾಸಪೂಜೆ ಹಾಗೂ ಚಾತುರ್ಮಾಸ ವ್ರತವನ್ನು ದಾವಣಗೆರೆ ಜಯದೇವ ವೃತ್ತದಲ್ಲಿರುವ ಶಂಕರಮಠದಲ್ಲಿ ಇಂದಿನಿಂದ ನೆರವೇರಿಸಲಿದ್ದಾರೆ.ಶ್ರೀಗಳ ನೇತೃತ್ವದಲ್ಲಿ ನಾಲ್ಕು ತಿಂಗಳ ಕಾಲ ಪ್ರತಿದಿನ ಬೆಳಿಗ್ಗೆ ೧೦ ಗಂಟೆಗೆ  ಚಾತುರ್ಮಾಸ ಪೂಜೆ ನೆರವೇರಲಿದ್ದು, ಸದ್ಭಕ್ತರು  ಆಗಮಿಸಿ, ಸ್ವಾಮಿಗಳಿಂದ ಅನುಗ್ರಹಿತ ತೀರ್ಥ ಪ್ರಸಾದ-ಫಲಮಂತ್ರಾಕ್ಷತೆಗಳನ್ನು ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಹುಬ್ಬಳ್ಳಿ ಚೈತನ್ಯಾಶ್ರಮದ ದತ್ತಾವಧೂತರು ಹಾಗೂ ಶಂಕರಮಠದ ಮುಖ್ಯ ಅರ್ಚಕರಾದ ಪವನ್ ಪಾಂಡೆ ಅವರು ತಿಳಿಸಿದ್ದಾರೆ.