ದಾವಣಗೆರೆ ವಿವಿ ರ‌್ಯಾಂಕ್ ವಿಜೇತರಿಗೆ ಡಾ. ನಸೀರ್ ಅಹ್ಮದ್ ರಿಂದ ಬಂಗಾರದ ಪದಕ

ದಾವಣಗೆರೆ.ಮಾ.೩೦; ದಾವಣಗೆರೆ ವಿಶ್ವವಿದ್ಯಾನಿಲಯದ ರ‌್ಯಾಂಕ್ ವಿಜೇತರಿಗೆ 2 ಬಂಗಾರದ ಪದಕಗಳನ್ನು ಈ ವರ್ಷದಿಂದ ಪ್ರತಿ ವರ್ಷ ಕೊಡುಗೆಯಾಗಿ ಸಾಮಾಜಿಕ ಕಾರ್ಯಕರ್ತ ಡಾ.ಸಿ.ಆರ್.ನಸೀರ್ ಅಹ್ಮದ್ ನೀಡಿದ್ದಾರೆ.ಸರ್ಕಾರಿ ಉರ್ದು ಶಾಲೆಯ ಶಿಕ್ಷಕರಾಗಿ ಸೇವೆ  ಸಲ್ಲಿಸಿದ ಅವರ ತಾಯಿ-ತಂದೆ ದಿ.ಶ್ರೀಮತಿ ಸಬೀರಾ ಮತ್ತು ಸಿ.ಅಬ್ದುಲ್ ರಹೀಂ ಅವರ ಸವಿನೆನಪಿಗಾಗಿ ಅವರ ಹೆಸರಿನಲ್ಲಿ ಈ ಕೊಡುಗೆ ನೀಡುತ್ತಿರುವುದಾಗಿ ತಿಳಿಸಿರುವ ಅವರು ದೇಣಿಗೆಯ ರೂ.1,10,000 ಗಳ ಚೆಕ್ಕನ್ನು ದಾವಣಗೆರೆ ವಿವಿ ಮೌಲ್ಯಮಾಪನ ಕುಲಸಚಿವರಾದ ಶ್ರೀಮತಿ ‌ ಅನಿತಾ  ಅವರಿಗೆ ಸಲ್ಲಿಸಿದ್ದಾರೆ.