ದಾವಣಗೆರೆ ರೈಲು ನಿಲ್ದಾಣದಲ್ಲಿ‌ ಮೂಲಭೂತ  ಸೌಕರ್ಯ ಹೆಚ್ಚಿಸಲು‌ ಮನವಿ

ದಾವಣಗೆರೆ.ಮೇ.೧೬; ಮೈಸೂರು ವಿಭಾಗದ ರೈಲ್ವೆಯಲ್ಲಿ 2ನೇ ಅತಿ ಹೆಚ್ಚು ಆದಾಯ ತಂದು ಕೊಡುವ ನಿಲ್ದಾಣ  ದಾವಣಗೆರೆ. ಆದ್ದರಿಂದ ರೈಲ್ವೆ ನಿಲ್ದಾಣದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಹೆಚ್ಚಿಸಬೇಕೆಂದು ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ . ಎಸ್ . ಜೈನ್ ಮನವಿ ಮಾಡಿದ್ದಾರೆ.ದಾವಣಗೆರೆ ರೈಲು ನಿಲ್ದಾಣದಿಂದ ದಿನಕ್ಕೆ ಸರಿ ಸುಮಾರು 25 ಕ್ಕೂ  ಹೆಚ್ಚು ಎಕ್ಸ್‌ಪ್ರೆಸ್‌ ರೈಲುಗಳು ಹಾಗು ಸುಮಾರು  20 ಗೂಡ್ಸ್  ರೈಲು ಗಾಡಿಗಳು ಸಂಚರಿಸುತ್ತವೆ ,ಅದಕ್ಕನು ಗುಣವಾಗಿ ದಾವಣಗೆರೆ ರೈಲು ನಿಲ್ದಾಣದಲ್ಲಿ   ಪ್ರಯಾಣಿಕರ ದಟ್ಟಣೆಯೂ ಹೆಚ್ಚಾಗಿದೆ.ಆದ್ದರಿಂದ  ನೈರುತ್ಯ ರೈಲ್ವೆ ವಲಯದ , ಮೈಸೂರು ವಿಭಾಗ  ದಾವಣಗೆರೆ ರೈಲು ನಿಲ್ದಾಣದಲ್ಲಿ ಹೆಚ್ಚಿನ ಸೌಕರ್ಯ ಕಲ್ಪಿಸಬೇಕು.ಅಂಗವಿಕಲರು ಹಾಗೂ ಸೀನಿಯರ್ ಸಿಟಿಜನ್ ರವರಿಗೆ ರೈಲು ನಿಲ್ದಾಣದ ಮುಖ್ಯ ದ್ವಾರದಿಂದ ರೈಲಿನ ಕೋಚ್ ಮುಟ್ಟಲು ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ಕಾರು ಹಾಗು ಪ್ರಯಾಣಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಶುಚಿ ರುಚಿಯಾದ ಊಟ ಹಾಗು ತಿಂಡಿ ಪೂರೈಸುವ ಕ್ಯಾಂಟೀನ್  ಹೀಗೆ ಮುಂತಾದ ಸೌಲಭ್ಯ ಕಲ್ಪಿಸಬೇಕು.ನಿತ್ಯ ಬೆಳಗ್ಗೆ ಬೆಂಗಳೂರು ಕಡೆಗೆ ಹೋಗುವ ರೈಲಿನಲ್ಲಿ ಟಿಕೆಟ್ ಪಡೆಯಲು ಪ್ರಯಾಣಿಕರು ಜನ  ದಟ್ಟಣೆಯಲ್ಲಿ  ಹರಸಾಹಸ ಪಡಬೇಕಾಗುತ್ತದೆ ಆದರಿಂದ ರೈಲ್ವೆ ಇಲಾಖೆ ಇಂಟರ್ ಸಿಟಿ ಹಾಗೂ ಪ್ಯಾಸೆಂಜರ್ ರೈಲು ಬರುವ ಸಮಯದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಕೌಂಟರ್ ಗಳಲ್ಲಿ  ಟಿಕೆಟ್ ನೀಡಬೇಕು ಹಾಗು ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತು ಕೊಳಲು ಹೆಚ್ಚಿನ ಬೆಂಚಿನ ವ್ಯವಸ್ಥೆ ಮಾಡಬೇಕು .ದಾವಣಗೆರೆ ರೈಲು ನಿಲ್ದಾಣ ದಲ್ಲಿ ಎಕ್ಸ್ ಪ್ರೆಸ್ ರೈಲುನಿಲ್ದಾಣ 5 ನಿಮಿಷ ಹಾಗೂ ಪ್ಯಾಸೆಂಜರ್ ರೈಲುಗಳ ನಿಲ್ದಾಣ 10 ನಿಮಿಷಕೆ ಹೆಚ್ಚಿಸಬೇಕು ರೈಲ್ವೆ ಸ್ಟೇಷನ್ ನಲ್ಲಿ  ಪ್ರಿ ಪೇಡ್ ಆಟೋ ಕೌಂಟರ್  ಆದಷ್ಟು ಬೇಗ ಪ್ರಾರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.