ದಾವಣಗೆರೆ ರಾಜ್ಯ ಸಮ್ಮೇಳನಕ್ಕೆ ತೆರಳಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರು

ಬೀದರ್:ಫೆ.2: ಫೆಬ್ರವರಿ 3 ಹಾಗೂ 4 ರಂದು ಬೆಣ್ಣೆನಗರಿ ದಾವಣಗೆರೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಘಟಕದಿಂದ ನಡೆಯಲಿರುವ ಪತ್ರಕರ್ತರ 38ನೇ ರಾಜ್ಯ ಸಮ್ಮೇಳನಕ್ಕೆ ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಬೀದರ್ ನಿಂದ ಪ್ರಯಾಣ ಬೆಳೆಸಿದರು.
ಸಮ್ಮೇಳನಕ್ಕೆ ಹೊರಡುವ ಮುನ್ನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಸಮ್ಮೇಳನಕ್ಕೆ ಹೊರಡುವ ಟೊಂಪೆÇ-ಟ್ರಾವೆಲರ್ ವಾಹನಕ್ಕೆ ಪೂಜೆ ಸಲ್ಲಿಸಿದರು. ರಾಜ್ಯ ಸಮ್ಮೇಳನದ ಜಯಘೋಷ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಯಘೋಷ ಮಾಡಿ ದಾವಣಗೆರೆ ಪ್ರಯಾಣಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಡಿ.ಕೆ ಗಣಪತಿ ಚಾಲನೆ ನೀಡಿದರು.
ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಬಸವರಾಜ ಕಾಮಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ನಾಗಶೆಟ್ಟಿ ಧರಂಪುರ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ದೀಪಕ ಮನ್ನಳ್ಳಿ, ಹಿರಿಯ ಪತ್ರಕರ್ತ ಗುರುರಾಜ ಕುಲಕರ್ಣಿ ಸಂಘದ ಜಿಲ್ಲಾ ಕಾರ್ಯಕಾರಿ ಸದಸ್ಯರಾದ ಗೋಪಿಚಂದ ತಾಂದಳೆ, ರೇವಣಸಿದ್ದಯ್ಯ ಸ್ಬಾಮಿ, ಸಂತೋಷ ಚಟ್ಟಿ, ಮಹಾರುದ್ರ ಡಾಕುಳಗಿ, ಪಂಡಿತ ಶಿಂಧೆ ಈ ಸಂದರ್ಭದಲ್ಲಿ ಇದ್ದರು.