ದಾವಣಗೆರೆ ಯೋಗಪಟುಗಳಿಗೆ ಯೋಗಾಚಾರ್ಯ” ಪ್ರಶಸ್ತಿ

ದಾವಣಗೆರೆ, ಏ.2: ಯೋಗ ಕ್ಷೇತ್ರದಲ್ಲಿ ಜೀವಮಾನದ ಯೋಗ ಸಾಧನೆ ಹಾಗೂ ಸೇವೆಗಾಗಿ ಕೊಡಮಾಡುವ ‘ಪ್ರತಿಷ್ಠಿತ’ ಅತ್ಯುನ್ನತ “ಯೋಗಾಚಾರ್ಯ” ಪ್ರಶಸ್ತಿಯು ಈ ಬಾರಿ ದಾವಣಗೆರೆ ಜಿಲ್ಲೆಯ ಇಬ್ಬರು ಯೋಗಿಗಳಿಗೆ ದೊರೆತಿದೆ.ಬೆಂಗಳೂರಿನ ಶಿವಜ್ಯೋತಿ ಯೋಗ ಸೆಂಟರ್’ವತಿಯಿಂದ “ಯೋಗೋತ್ಸವ- 2021” ಆನ್‌ಲೈನ್ ಆಯ್ಕೆ ಕಾರ್ಯಕ್ರಮದ ಅಡಿಯಲ್ಲಿ ದಾವಣಗೆರೆ ನಗರದ ಪರಮಾನಂದ ಯೋಗ ಕೇಂದ್ರದ ಅಂತರಾಷ್ಟ್ರೀಯ ಯೋಗ ಶಿಕ್ಷಕರು, ತೀರ್ಪುಗಾರರು ಆದಂತಹ “ವೈದ್ಯ. ತೀರ್ಥರಾಜ್ ಹೋಲೂರ್”ರವರಿಗೆ ಹಾಗೂ ಶ್ರೀ ಸಾಯಿ ಗುರುಕುಲ ಯೋಗ ಕೇಂದ್ರದ ಅಂತರರಾಷ್ಟ್ರೀಯ ಯೋಗ ಶಿಕ್ಷಕರು, ತೀರ್ಪುಗಾರರು ಆದಂತಹ “ಅನಿಲ್ ಕುಮಾರ್ ರಾಯ್ಕರ್” ರವರಿಗೆ ಸಂಸ್ಥೆಯ ಮುಖ್ಯಸ್ಥರಾದ ಮಹದೇವ್’ರವರು ಪ್ರಶಸ್ತಿ ಪ್ರದಾನ ಮಾಡಿದರು.ಇವರುಗಳಿಗೆ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಹಾಗು ರಾಜ್ಯ ರೆಫರಿಗಳು,ಯೋಗ ಪಟುಗಳು ಮತ್ತು ದಾವಣಗೆರೆ ಜಿಲ್ಲಾ ಯೋಗ ಪರಿವಾರದ ಸದಸ್ಯರು ಹಾಗೂ ಪಾರಂಪರಿಕ ವೈದ್ಯರು, ಯೋಗ ವಿಧ್ಯಾರ್ಥಿಗಳು ಶುಭಕೋರಿ, ಅಭಿನಂದನೆ ಸಲ್ಲಿಸಿದ್ದಾರೆ.