ದಾವಣಗೆರೆ; ಮಹಾವೀರಸ್ವಾಮಿ ತೀರ್ಥಂಕರರಿಗೆ ಅಭಿಷೇಕ 

ದಾವಣಗೆರೆ. ಏ.೪: ದಾವಣಗೆರೆಯ ಸಮಸ್ತ ದಿಗಂಬರ ಜೈನ ಸಮಾಜದ ವತಿಯಿಂದ ಮತ್ತು ಮಹಾವೀರ ಯುವ ಮಂಚ್ ನ ನೇತೃತ್ವದಲ್ಲಿ ನಗರದ ಎನ್.ಆರ್. ರಸ್ತೆಯಲ್ಲಿರುವ ಶ್ರೀ 1008 ಪಾರ್ಶ್ವನಾಥ ಜಿನ ಮಂದಿರದಲ್ಲಿ 2622ನೇ ಮಹಾವೀರ ಜಯಂತ್ಯೋತ್ಸವ ಹಾಗೂ 70ನೇ ವರ್ಷದ ಶ್ರೀ ಮಹಾವೀರ ಜನ್ಮ ಕಲ್ಯಾಣೋತ್ಸವ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಇಂದುಬೆಳಿಗ್ಗೆ 7.30 ರಿಂದ ಗಂಟೆಗೆ ಮಹಾವೀರಸ್ವಾಮಿ ತೀರ್ಥಂಕರರಿಗೆ 108 ಕಳಶ ಅಭಿಷೇಕ ಮಾಡಲಾಗಿತ್ತು. ನಂತರ  ಮಹಾವೀರಸ್ವಾಮಿಯ ಭವ್ಯ ಮೆರವಣಿಗೆಯು ಪಾರ್ಶ್ವನಾಥ ಜಿನ ಮಂದಿರದಿಂದ ರಾಜ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ನಡೆಯಿತು.ಬಳಿಕ ಸಮಾಜದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಂಜೆ 7 ಗಂಟೆಗೆ ಪದ್ಮಾಂಬ ಮಹಿಳಾ ಸಮಾಜದ ವತಿಯಿಂದ ಮಹಾವೀರ ತೀರ್ಥಂಕರ್ ಬಾಲ ಲೀಲೋತ್ಸವ ನಾಮಕರಣ ಹಾಗೂ ತೊಟ್ಟಿಲು ಕಾರ್ಯಕ್ರಮ ನೆರವೇರಲಿದೆ.