ದಾವಣಗೆರೆ; ಬೃಹತ್ ಶೋಭಾಯಾತ್ರೆಗೆ ಗಣ್ಯರಿಂದ ಚಾಲನೆ

ಸಂಜೆವಾಣಿ ವಾರ್ತೆ 

ದಾವಣಗೆರೆ.ಅ.26;ವಿಶ್ವ ಹಿಂದು ಪರಿಷದ್  ಮತ್ತು ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಆಶ್ರಯದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಬೃಹತ್ ಶೋಭಾಯಾತ್ರೆ ವಿಜೃಂಭಣೆ ಯಿಂದ ನಡೆಯಿತು. ನಗರದ ಶ್ರೀ ವೆಂಕಟೇಶ್ವರ ವೃತ್ತದಿಂದ ಪ್ರಾರಂಭವಾದ ಬೃಹತ್ ಶೋಭಾಯಾತ್ರೆಗೆ ಶ್ರೀ ಜಡೆಸಿದ್ದೇಶ್ವರ ಶಿವಯೋಗೀಶ್ವರ ಮಠದ‌ ಶ್ರೀ  ಶಿವಾನಂದ ಮಹಾಸ್ವಾಮಿಗಳು ಚಾಲನೆ ನೀಡಿದರು.ಮಾಜಿ ಸಚಿವ ಎಸ್.ಎ ರವೀಂದ್ರನಾಥ್,ಡಾ.ಎ.ಹೆಚ್ ಶಿವಯೋಗಿಸ್ವಾಮಿ‌ ಸೇರಿದಂತೆ ಅನೇಕ ಮುಖಂಡರು‌ ಇದ್ದರು.ಶೋಭಾಯಾತ್ರೆಯು ಬಂಬೂಬಜಾರ್, ಚೌಕಿಪೇಟೆ, ದುರ್ಗಾಂಬಿಕಾ ದೇವಸ್ಥಾನ ರಸ್ತೆ ಮುಂತಾದೆಡೆ ಸಾಗಿಬಂದಿತು. ಸಾವಿರಾರು ಜನರು ಸಂಭ್ರಮದ ಶೋಭಾ ಯಾತ್ರೆಗೆ ಸಾಕ್ಷಿಯಾದರು. ಪ್ರಮುಖ ಗಣ್ಯರು, ಮಾಜಿ ಶಾಸಕರು, ಜನ ಪ್ರತಿನಿಧಿಗಳು, ಸಮಾಜದ ಮುಖಂಡರು, ಮಾಜಿ ಮೇಯರ್ ಗಳಾದಬಿ.ಜೆ ಅಜಯ್ ಕುಮಾರ್ , ಎಸ್ ಟಿ. ವೀರೇಶ್, ರಾಜನಹಳ್ಳಿ ಶಿವಕುಮಾರ್, ನಗರ ಸಂಚಾಲಕ ಕೆ.ಆರ್. ಮಲ್ಲಿ ಕಾರ್ಜುನ್,ಎನ್.ರಾಜಶೇಖರ್,ಧನುಷ್,‌ಶ್ರೀನಿವಾಸ್ ದಾಸಕರಿಯಪ್ಪ,ರಾಕೇಶ್, ಕೆ.ಬಿ. ಶಂಕರನಾರಾಯಣ, ವೈ. ಮಲ್ಲೇಶ್ ಇತರರು ಇದ್ದರು.ಭಾರತಮಾತೆ, ಶ್ರೀ ಚಾಮುಂಡೇಶ್ವರಿ, ಶ್ರೀ ದುರ್ಗಾಂಬಿಕಾದೇವಿ, ವಿವೇಕಾನಂದ, ಛತ್ರಪತಿ ಶಿವಾಜಿ ಇತರರ ಭಾವಚಿತ್ರ,‌ ಸ್ತಬ್ಧ ಚಿತ್ರಗಳು, ನಂದಿಕೋಲು, ಡೊಳ್ಳು, ಸಮ್ಮಾಳ ಇತರೆ ಜಾನಪದ ಕಲಾತಂಡಗಳು ಮೆರಗು ಹೆಚ್ಚಿಸಿದವು.