ದಾವಣಗೆರೆ ಬಿಜೆಪಿ ಕಚೇರಿಯಲ್ಲಿದ್ದ ಶೆಟ್ಟರ್ ಪೋಟೋ ತೆರವು

 ದಾವಣಗೆರೆ.ಏ.೧೯; ನಾಲ್ಕು ದಶಕದ ಬಿಜೆಪಿ ಸಂಪರ್ಕ ಕಡಿದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಡೆಗೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶಕೊಂಡಿದ್ದಾರೆ. ದಾವಣಗೆರೆ ಬಿಜೆಪಿ ಪಕ್ಷದ ಜಿಲ್ಲಾ ಕಚೇರಿಯಲ್ಲಿದ್ದ ಶೆಟ್ಟರ್ ಪೋಟೋವನ್ನು ತೆರವುಗೊಳಿಸಿ ಕಚೇರಿ ಬೆಂಕಿ ಹಚ್ಚಿ ದಹಿಸಿದ್ದಾರೆ. ಕಾಂಗೆಸ್ ಸೇರಿದ ಶೆಟ್ಟರ್ ವಿರುದ್ಧ ಘೋಷಣೆ ಕೂಗಿದ್ದಾರೆ.ದಾವಣಗೆರೆ ಉತ್ತರ ಕ್ಷೇತ್ರದ ಚುನಾವಣಾ ಉಸ್ತುವಾರಿ ಜೀತುಬಾಯ್ ವಾಗನಿಯ ಸಮ್ಮುಖದಲ್ಲಿ ಶೆಟ್ಟರ್ ಭಾವಚಿತ್ರ ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಗುಜರಾತ್‌ನ ಮಾಜಿ ಶಾಸಕ ಕಾಂತಿಲಾಲ್ ಅಮೃತೀಯ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಜಗದೀಶ್, ದೂಡಾ ಅಧ್ಯಕ್ಷ ಎ.ವೈ.ಪ್ರಕಾಶ್, ಪಾಲಿಕೆ ಸದಸ್ಯ ಕೆ.ಪ್ರಸನ್ನಕುಮಾರ್, ಕೆ.ಆರ್.ಶಿವಾನಂದ್, ಉತ್ತರ ಮಂಡಲ ಅಧ್ಯಕ್ಷ ಬಿ.ಜಿ.ಸಂಗನಗೌಡ್ರು,ಚ್.ಎನ್.ಶಿವಕುಮಾರ್, ಬಸವರಾಜಯ್ಯ, ರಾಜು ಶಾಮನೂರು, ಉತ್ತರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಸೇರಿ ಮತ್ತಿತರಿದ್ದರು.