ದಾವಣಗೆರೆ ನೇತ್ರಾಲಯದ ಜೊತೆ ವಿಲೀನಗೊಂಡ ಡಾ. ಅಗರವಾಲ್ಸ್ ಗ್ರೂಪ್ ಆಫ್ ಐ ಹಾಸ್ಪಿಟಲ್ಸ್

ದಾವಣಗೆರೆ.ಮೇ.೨೬: ಡಾ. ಸುನೀಲ್ ಜಿ ಸ್ಥಾಪಿಸಿದ ಕಣ್ಣಿನ ಆಸ್ಪತ್ರೆ ದಾವಣಗೆರೆ ನೇತ್ರಾಲಯವು ಡಾ. ಅಗರವಾಲ್ಸ್ ಐ ಹಾಸ್ಪಿಟಲ್ಸ್ ಜೊತೆ ವಿಲೀನವಾಗಿದ್ದು, ರಾಜ್ಯದ 18ನೇ ಕೇಂದ್ರವಾಗಿದೆ. 4200 ಚದರಡಿಯಲ್ಲಿ ವ್ಯಾಪಿಸಿರುವ ಆಸ್ಪತ್ರೆಯು ಪರಿಣಿತ ನೇತ್ರ ತಜ್ಞರು ಮತ್ತು ಇತ್ತೀಚಿನ ತಂತ್ರಜ್ಞಾನ ಹೊಂದಿದ್ದು, ಉತ್ತಮ ಕಣ್ಣಿನ ಆರೈಕೆಯನ್ನು ನೀಡುತ್ತದೆ. ರೆಟಿನಾ ರೋಗಿಗಳಿಗೆ ಇದೇ ಮೊದಲ ಬಾರಿಗೆ ಡಯಾಗ್ನಾಸ್ಟಿಕ್ ಪರಿಕರವಾಗಿರುವ ಅತ್ಯಾಧುನಿಕ ಒಸಿಟಿ ಆಂಜಿಯೋಗ್ರಫಿಯನ್ನು ಈ ಆಸ್ಪತ್ರೆ ಹೊಂದಿದೆ. ಸಮುದಾಯಕ್ಕೆ ಸೇವೆಯ ಜೊತೆಗೆ ಹಿರಿಯ ನಾಗರಿಕರಿಗೆ ಉಚಿತ ಸಲಹೆ ಜೂನ್ 30 ರ ವರೆಗೆ ನೀಡಲಿದೆ. ಮುಂದಿನ 18-24 ತಿಂಗಳುಗಳಲ್ಲಿ ರಾಜ್ಯದಾದ್ಯಂತ 10 ಕಣ್ಣಿನ ಚಿಕಿತ್ಸೆ ಸೌಲಭ್ಯಗಳನ್ನು ಡಾ. ಅಗರವಾಲ್ಸ್ ಐ ಹಾಸ್ಪಿಟಲ್ಸ್ ಸ್ಥಾಪಿಸಲಿದೆ. ಆಸ್ಪತ್ರೆ ಜಾಲವು 135 ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಭಾರತ ಮತ್ತು ಆಫ್ರಿಕಾದಲ್ಲಿ ಹೊಂದಿರಲಿದೆ. 10 ದೇಶಗಳು ಮತ್ತು ಭಾರತದಲ್ಲಿನ 12 ರಾಜ್ಯಗಳಲ್ಲಿ ಇದು ವ್ಯಾಪಿಸಿದೆ. ಈಗಾಗಲೇ 11 ಕೇಂದ್ರಗಳು ಬೆಂಗಳೂರಿನಲ್ಲಿ ಮತ್ತು 7 ಕೇಂದ್ರಗಳು ಬೆಂಗಳೂರಿನ ಹೊರಗಿವೆ.ಆಪ್ಥಾಲ್ಮಾಲಜಿಸ್ಟ್ ಡಾ. ಸುನೀಲ್ ಮಾತನಾಡಿ, ಕಣ್ಣಿನ ಆರೈಕೆಯಲ್ಲಿ ನವೀನ ಶಸ್ತçಚಿಕಿತ್ಸೀಯ ಕ್ರಮಗಳು ಮತ್ತು ಅದ್ಭುತ ಸುಧಾರಣೆಗೆ ಹೆಸರಾಗಿರುವ ಡಾ. ಅಗರವಾಲ್ಸ್ ಐ ಹಾಸ್ಪಿಟಲ್ಸ್ ಜೊತೆಗೆ ಅಧಿಕೃತ ಪಾಲುದಾರಿಕೆಯನ್ನು ನಾವು ಉತ್ಸಾಹದಿಂದ ಘೋಷಿಸುತ್ತಿದ್ದೇವೆ. ಈ ಸಹಭಾಗಿತ್ವದಿಂದಾಗಿ ತಂತ್ರಜ್ಞಾನ ಮತ್ತು ಉತ್ತಮ ಅಭ್ಯಾಸಗಳನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಡಾ. ಅಗರವಾಲ್ಸ್ ಐ ಹಾಸ್ಪಿಟಲ್‌ನಿಂದಾಗಿ ಕಣ್ಣಿನ ಆರೋಗ್ಯ ಸೇವೆಯು ಜಾಗತಿಕ ಮಟ್ಟಕ್ಕೆ ತಲುಪಲಿದೆ ಎಂಬ ವಿಶ್ವಾಸವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗುಣಮಟ್ಟದ ಆರೋಗ್ಯಸೇವೆಯನ್ನು ಒದಗಿಸಲು ಡಾ. ಅಗರವಾಲ್ಸ್ ಐ ಹಾಸ್ಪಿಟಲ್ಸ್ ಬದ್ಧವಾಗಿದೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಇನ್ನೊಂದು 10 ಕೇಂದ್ರಗಳನ್ನು ತೆರೆಯಲು ಗುರಿಯಿದೆ.