
ದಾವಣಗೆರೆ.ಏ.೨೨; ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ಜಿ ಅಜಯ್ ಕುಮಾರ್ ವತಿಯಿಂದ ನಗರದ 11ನೇ ವಾರ್ಡಿನ ಬಸರಾಜ್ ಪೇಟೆ, ಹಗ್ಗೆದಿಬ್ಬ ಸರ್ಕಲ್, ಬಾಷ ನಗರ, ಅರಳಿ ಮರ ಸರ್ಕಲ್, ಬೇತೂರು ರಸ್ತೆಯ ಶ್ರೀನಿವಾಸ ದೇವಸ್ಥಾನದ ಸುತ್ತ, ಗಿರಿ ಟಾಕೀಸ ಹತ್ತಿರದಲ್ಲಿ ಪ್ರಚಾರ ನಡೆಸಿದರು.ಈ ವೇಳೆ ಮನೆಮನೆಗೆ ತೆರಳಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ತಿಳಿಸಿ ಈ ಬಾರಿಯೂ ಬಿಜೆಪಿ ಪಕ್ಷ ಬೆಂಬಲಿಸುವಂತೆ ಮನವಿ ಮಾಡಿದರು. ಹಿರಿಯರು,ಯುವಕರು ಬಿಜೆಪಿ ಪಕ್ಷದ ಸಾಧನೆಗಳಿಗೆ ಬೆಂಬಲ ವ್ಯಕ್ತಪಡಿಸಿ ಬಿಜೆಪಿ ಅಭ್ಯರ್ಥಿಗೆ ಗೆಲುವಿನ ವಿಶ್ವಾಸ ಮೂಡಿಸಿದ್ದು ಸಂತಸ ತಂದಿದೆ ಎಂದರು.ಈ ವೇಳೆ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು,ಬೆಂಬಲಿಗರು ಹಾಗೂ ಅಭಿಮಾನಿಗಳು ಜೊತೆಗಿದ್ದರು.