ದಾವಣಗೆರೆ ತಾಲೂಕಿನಲ್ಲಿ ಸಿಡಿಲಿಗೆ ಇಬ್ಬರು ಬಲಿ

ದಾವಣಗೆರೆ : ದಾವಣಗೆರೆ ತಾಲೂಕಿನಲ್ಲಿ ಸಿಡಿಲಿಗೆ ಇಬ್ಬರು ಮೃತಪಟ್ಟಿರುವ ಘಟನೆ ಜರುಗಿದೆ. ತಾಲೂಕಿನ ಮಾಯಕೊಂಡ ಗ್ರ‍ಾಮೀಣ ಭಾಗದಲ್ಲಿ ಸಿಡಿಲು ಗುಡುಗು ಸಮೇತ ಮಳೆ ಸುರಿದಿದ್ದು,ಜೊತೆಗೆ ಸಿಡಿಲಿಗೆ ಇಬ್ಬರು ಮೃತಪಟ್ಟಿದ್ದಾರೆ.
ಇಂದು ಸಂಜೆ 5 ಗಂಟೆಗೆ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ಹುಚ್ಚವ್ವನಹಳ್ಳಿ ಕೆರೆ ಏರಿಯ ಮೇಲೆ ಸಿಡಿಲು ಬಡಿದು ಪರಿಣಾಮ ರವಿಕುಮಾರ್ 32 ವರ್ಷ, ಹುಚ್ಚವ್ವನಹಳ್ಳಿ ಗ್ರಾಮ, ದಾವಣಗೆರೆ ತಾಲ್ಲೂಕು. ಹಾಗೂ ರಮೇಶ 30 ವರ್ಷ, ಹುಚ್ಚವ್ವನಹಳ್ಳಿ ಗ್ರಾಮದ ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಇಬ್ಬರ ಮೃತ ದೇಹಗಳನ್ನು ಮಾಯಕೊಂಡ ಗ್ರಾಮದಲ್ಲಿರುವ ಸರ್ಕಾರಿ ಪ್ರಾ.ಆ.ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ.