ದಾವಣಗೆರೆ ತಹಶೀಲ್ದಾರ್ ಗೆ ಸರ್ವೋತ್ತಮ ಪ್ರಶಸ್ತಿ

ದಾವಣಗೆರೆ.ಏ.೨೪; ರಾಜ್ಯ ಸರ್ಕಾರದ ವಿವಿಧಇಲಾಖೆಗಳಲ್ಲಿ 10 ಜನ ಅತ್ಯುನ್ನತ ಸೇವೆಗೈದ/ಸಾಧನೆಗೈದ ರಾಜ್ಯ ಸರ್ಕಾರಿ ಅಧಿಕಾರಿಗಳು/ನೌಕರರಿಗೆ “ಸರ್ವೋತ್ತಮ ಸೇವಾ ಪ್ರಶಸ್ತಿ’ ಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.2020-2021 ನೇ ಸಾಲಿನಲ್ಲಿ ದಾವಣಗೆರೆ ತಹಸೀಲ್ದಾರ್ ಬಿ ಎನ್ ಗಿರೀಶ್ ಅವರಿಗೆ ರಾಜ್ಯ ಮಟ್ಟದ “ಸರ್ವೋತ್ತಮ ಸೇವಾ ಪ್ರಶಸ್ತಿ”ಯನ್ನ ಸರ್ಕಾರ ಆದೇಶಿಸಿದೆ.

ಸರ್ವೋತ್ತಮ ಸೇವಾ ಪ್ರಶಸ್ತಿ ಆಯ್ಕೆ ಹೇಗಿರುತ್ತೆ:ಪ್ರತಿ ವರ್ಷವೂ ನೀಡುವ ಬಗ್ಗೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಜಿಲ್ಲಾವಾರು, ಇಲಾಖಾವಾರು ಮತ್ತು ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿತು, ರಾಜ್ಯ ಇಲಾಖೆ ಮತ್ತು ಜಿಲ್ಲಾವಾರು
ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನವನ್ನು online ಮೂಲಕ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆಯ್ಕೆ ಸಮಿತಿ ಸಭೆಯಲ್ಲಿ 2020-21ನೇ ಸಾಲಿನಲ್ಲಿ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿಗೆ online ಮೂಲಕ ಸ್ವೀಕೃತವಾದ ಅರ್ಜಿಗಳನ್ನು ಆಯಾ ಇಲಾಖೆಗಳಿಗೆ ಶಿಫಾರಸ್ಸಿಗಾಗಿ ಕಳುಹಿಸಿಲಾಗಿತ್ತು. ಸದರಿ ಇಲಾಖಾ ಕಾರ್ಯದರ್ಶಿಗಳಿಂದ
ಅನುಮೋದಿತವಾಗಿ ಬಂದ ಅರ್ಜಿಗಳನ್ನು ಸಮಿತಿ ಸಭೆಯಲ್ಲಿ ಮಂಡಿಸಲಾಯಿತು. ಈ ಅಧಿಕಾರಿ/ನೌಕರರ ವಿರುದ್ಧ ಯಾವುದೇ ಇಲಾಖಾ ವಿಚಾರಣೆ/ಲೋಕಾಯುಕ್ತ ತನಿಖೆ/ನ್ಯಾಯಾಂಗ ತನಿಖೆ/ಕ್ರಿಮಿನಲ್ ಮೊಕದ್ದಮೆ ಇವುಗಳು ಬಾಕಿ ಇರುವುದಿಲ್ಲವೆಂದು ಇಲಾಖಾ ವತಿಯಿಂದ ನೀಡಿದ ವರದಿಗಳನ್ನು ಆಯ್ಕೆ ಸಮಿತಿಯು ಗಮನಿಸುತ್ತದೆ.ಪ್ರಶಸ್ತಿಯಲ್ಲಿ ಏನಿರುತ್ತೆ:
ಪ್ರತಿ ಪ್ರಶಸ್ತಿಯು ರೂ.25.000/- ರೂಪಾಯಿ ಪ್ರೋತ್ಸಾಹ ಧನ ಹಾಗೂ ಪ್ರಶಸ್ತಿ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ.