ದಾವಣಗೆರೆ; ತರಕಾರಿ ಬೆಲೆ ದಿಢೀರ್ ಏರಿಕೆಬೆಣ್ಣೆ ಸಂತೆಗೆ ಮುಗಿಬಿದ್ದ ಜನ

ದಾವಣಗೆರೆ.ಏ.೨೫; ವಿಕೇಂಡ್ ಲಾಕ್ ಡೌನ್ ನಲ್ಲಿಯೂ ಬೆಣ್ಣೆನಗರಿಯಲ್ಲಿ ಬೆಣ್ಣೆಗೆ ಪುಲ್ ಡಿಮ್ಯಾಂಡ್ ಕಂಡು ಬಂದಿತ್ತು.ಭಾನುವಾರ ಕೆಆರ್ ಮಾರ್ಕೇಟ್ ನಲ್ಲಿರುವ ಬೆಣ್ಣೆ ಮಾರಾಟ ಸಂತೆಯಲ್ಲಿ ಬೆಣ್ಣೆ ಕೊಳ್ಳಲು  ಜನತೆ ಮುಗಿಬಿದ್ದಿದ್ದರು.ಕೇವಲ ಅರ್ಧ ಗಂಟೆಯಲ್ಲೆ  ಬೆಣ್ಣೆ ಮಾರಾಟವಾಗಿದ್ದು ಬೆಣ್ಣೆ ಸಂತೆಯಲ್ಲಿ ಕೋವಿಡ್ ನಿಯಮಗಳನ್ನು ವ್ಯಾಪಾರಸ್ಥರು ಹಾಗೂ ಜನರು ಗಾಳಿಗೆ ತೂರಿದ್ದಾರೆ.10 ಗಂಟೆಯೊಳಗೆ ವ್ಯಾಪಾರ ಮಾಡಬೇಕೆನ್ನುವ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಮಾಯವಾಗಿದ್ದು ಬಹುತೇಕರು ಮಾಸ್ಕ್ ಧರಿಸದಿರುವುದು ಕಂಡುಬಂದಿದೆ.
ದುಪ್ಪಟ್ಟಾದ ತರಕಾರಿ ಹಣ್ಣುಗಳ ದರವೀಕೆಂಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ  ಭಾನುವಾರದ ಸಂತೆ ಬೆಳಗ್ಗೆ ೭ರಿಂದ ೧೦ ಗಂಟೆಯವರೆಗೆ ಮಾತ್ರ ನಡೆದಿದೆ.ಇದರಿಂದಾಗಿ ಏಕಾಏಕಿ ತರಕಾರಿ ಹಾಗೂ ಹಣ್ಣುಗಳ ಬೆಲೆ ದಿಢೀರ್ ಏರಿಕೆಯಾಗಿದ್ದು ಜನರಿಗೆ ಹೊರೆಯಾಗಿದ್ದು ಕಂಡು ಬಂದಿತ್ತು.ವ್ಯಾಪಾರಸ್ಥರು ತಾವು ನೀಡಿದ ತರಕಾರಿ ಹಾಗೂ ಹಣ್ಣುಗಳನ್ನೇ ತೆಗೆದು ಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು.ವ್ಯಾಪಾರಿಗಳು ಮನಬಂದಂತೆ ದರ ನಿಗದಿ ಮಾಡಿದ್ದು ನಮಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಜನರು ಬೇಸರ ವ್ಯಕ್ತಪಡಿಸಿದರು.