ದಾವಣಗೆರೆ ; ಟಿಪ್ಪರ್ ಲಾರಿ ಹರಿದು ಎರಡು ವರ್ಷದ ಬಾಲಕಿ ಸ್ಥಳದಲ್ಲೇ ಸಾವು

ದಾವಣಗೆರೆ : ಟಿಪ್ಪರ್ ಲಾರಿ ಹರಿದು ಎರಡು ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಹಳೇ ಕುಂದುವಾಡದಲ್ಲಿ ಇಂದು ನಡೆದಿದೆ.ಕುಂದುವಾಡ ಗ್ರಾಮದ ಗಣೇಶ್ ಅವರ ಪುತ್ರಿ ಚರಸ್ವಿ (2)ವರ್ಷ ಸಾವನ್ನಪ್ಪಿದ ಬಾಲಕಿ.

ಅಂಗನವಾಡಿ ಮುಗಿಸಿ ಮಧ್ಯಾಹ್ನ ತನ್ನ ಅಜ್ಜಿಯೊಂದಿಗೆ ಮನೆಗೆ ಬರುತ್ತಿದ್ದ ಬಾಲಕಿ ತಲೆ ಮೇಲೆ KA 17, D 5017 ನಂಬರ್ ರಿನ ಟಿಪ್ಪರ್ ಲಾರಿ ಹರಿದಿದೆ.ಚಕ್ರ ತಲೆ ಮೇಲೆ ಹರಿದ ರಭಸಕ್ಕೆ ಬಾಲಕಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದೆ.
ಅಜಾಗರೂಕತೆಯಿಂದ ಲಾರಿ ಚಾಲನೆ ಮಾಡಿದ ಪರಿಣಾಮ ಬಾಲಕಿ ಜೀವ ಬಲಿಯಾಗಿದೆ. ಬಾಲಕಿಯ ಸ್ಥಿತಿ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.ಘಟನೆ ಖಂಡಿಸಿ ಗ್ರಾಮಸ್ಥರು ಕೆಲ ಕಾಲ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ನಡೆಯುತ್ತಿದ್ದಂತೆ ಲಾರಿ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ.ಲಾರಿ ಚಾಲಕ, ಮಾಲೀಕನ ಬಂಧನಕ್ಕೆ ಗ್ರಾಮಸ್ಥರು ಆಗ್ರಹಿಸಿದರು.ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆ, ವಿದ್ಯಾನಗರ ಪೊಲೀಸರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.