ದಾವಣಗೆರೆ ಜಿಲ್ಲೆಯಲ್ಲಿ ಕನ್ನಡ ತೇರಿನ ಯಶಸ್ವೀ ಸಂಚಾರ 

 ದಾವಣಗೆರೆ, ಜು.18: ಸ್ವರಾಜ್ಯಕ್ಕೆ 75 ರ ಸಂಭ್ರಮಕ್ಕಾಗಿ ಯುವಾಬ್ರಿಗೇಡ್ ಆಯೋಜಿಸಿರುವ ಕನ್ನಡ ತೇರು  ದಾವಣಗೆರೆ ಜಿಲ್ಲೆಯ ವಿವಿಧ ಭಾಗದಲ್ಲಿ ಸಂಚರಿಸಿತು.ಹೆಬ್ಬಾಳು ಗ್ರಾಮದಲ್ಲಿ ಬೆಳಗ್ಗೆ ಶ್ರೀ ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳಿಂದ ಕನ್ನಡತೇರಿನ ಪೂಜೆ ಹಾಗೂ ಸ್ವಾಗತದೊಂದಿಗೆ ಪ್ರಾರಂಭವಾದ ಕನ್ನಡ ತೇರು, ಗ್ರಾಮದ ವಿದ್ಯಾರ್ಥಿಗಳು, ಯುವಕರು ಹಾಗೂ ಗ್ರಾಮಸ್ಥರಿಗೆ ಸ್ವಾತಂತ್ರ್ಯ ಹೋರಾಟಗಾರರ, ದೇಶಕ್ಕಾಗಿ ತಮ್ಮ ಜೀವನವನ್ನೇ  ಮುಡಿಪಾಗಿಟ್ಟ ವೀರಯೋಧರ ಕುರಿತಾದ ಸಾಕ್ಟ್ಯಚಿತ್ರವನ್ನು ಪ್ರದರ್ಶಿಸಲಾಯಿತು.ನಂತರ ಸಂತೇಬೆನ್ನೂರು ಗ್ರಾಮಸ್ಥರು ಕಹಳೆ ಸದ್ದಿನೊಂದಿಗೆ ಕನ್ನಡ ತೇರಿಗೆ ಅದ್ದೂರಿ ಸ್ವಾತ ನೀಡಿದರು. ದಾರಿ ಉದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ತದನಂತರ ವಾದ್ಯ ಮೇಳಗಳ ಸದ್ದಿನೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದ ಕಂದಗಲ್ಲು ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಮಾಯಕೊಂಡದಲ್ಲಿ ಮದಕರಿನಾಯಕನ ಸಮಾಧಿ ಸ್ಥಳದಿಂದ ವಾದ್ಯ ಮೇಳಗಳ  ಸದ್ದಿನ ಜೊತೆ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದರು ನಂತರ ಸಾಕ್ಯಚಿತ್ರ ಪ್ರದರ್ಶನ ಮತ್ತು ವೇದಿಕೆ ಕಾರ್ಯಕ್ರಮ ಜರುಗಿತು. ಇಲ್ಲಿಂದ ಸಾಗಿದ ಕನ್ನಡ ತೇರು ಮುಂದೆ ಚಿತ್ರದುರ್ಗ ಮಾರ್ಗವಾಗಿ ಸಂಚಾರ ಮುಂದುವರೆಸಿದೆ.ಮಾಯಕೊಂಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ. ಪಂ. ಸದಸ್ಯರಾದ ಶಿವಮ್ಮ, ಮಲ್ಲಪ್ಪ, ಟಿ.ಲಕ್ಷ್ಮಣ,  ಎಂ. ಮಲ್ಲಿಕಾರ್ಜುನ, ಜಿ.ಸಿ. ಸಾಕಮ್ಮ,  ಎ.ಆರ್. ಸುನಿತಾ, ಎಂ.ಎನ್. ಮಂಜುನಾಥ, ಡಿ.ಹೆಚ್. ಮೈತ್ರಮ್ಮ, ಜಿ.ಸಿ. ಪುಷ್ಪಾ, ಎಸ್. ಆರ್. ಬಸವರಾಜ, ನಾಗಮ್ಮ, ಜಿ. ನಾಗಪ್ಪ, ಹೆಚ್. ಲತಾ, ಆರ್. ಹನುಮಂತಪ್ಪ, ಪಿ.ಸಿ. ಗೌರಮ್ಮ ಸೇರಿದಂತೆ ಗ್ರಾಮದ ಮುಖಂಡರು, ಯುವಾಬ್ರಿಗೇಡ್ನ ಹೆಚ್.ಎಂ. ಚೇತನ್, ನಂದೀಶ್ ಎಸ್., ಗೋಪಾಲ್ ಎಂ. ಭೀಮಾ ಎ. ಸೇರಿದಂತೆ ಇತರೆ ಕಾರ್ಯಕರ್ತರು ಹಾಜರಿದ್ದರು.  ಈ ಎಲ್ಲಾ ಗ್ರಾಮಸ್ಥರ ಅಭೂತಪೂರ್ವ ಸ್ವಾಗತ ಹಾಗೂ ಯಶಸ್ವಿ ಕಾರ್ಯಕ್ರಮಕ್ಕೆ ಕಾರಣೀಭೂತರಾದ ಎಲ್ಲರಿಗೂ ಯುವಾಬ್ರಿಗೇಡ್ ಜಿಲ್ಲಾ ಸಂಚಾಲಕ ಕೆ.ಎಸ್. ಗಜೇಂದ್ರ ಅಭಿನಂದನೆ  ತಿಳಿಸಿದ್ದಾರೆ.

Attachments area