ದಾವಣಗೆರೆ ಜಿಲ್ಲಾ ಬಡ್ತಿ ಮುಖ್ಯ ಶಿಕ್ಷಕರ ಜಿಲ್ಲಾ ಮಟ್ಟದ ಸಮಗ್ರ ಶಿಕ್ಷಣ ಕಾರ್ಯಗಾರ ಜಿಲ್ಲಾ ಗುರುಭವನದಲ್ಲಿ ಜರುಗಿತು. ಡಯಟ್  ಪ್ರಾಂಶುಪಾಲರಾದ ಗೀತಾ ಉದ್ಘಾಟನೆ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಎಂ ರಂಗಸ್ವಾಮಿ, ಕಾರ್ಯದರ್ಶಿಯಾದ  ವೆಂಕಟೇಶ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಸಂಘದ ಅಧ್ಯಕ್ಷರಾದ ಪಾಲಾಕ್ಷಪ್ಪ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷರಾದ ಡಿ ರಾಮಪ್ಪ ಹಾಗೂ ಕಾರ್ಯದರ್ಶಿ ಜಗದೀಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.