ದಾವಣಗೆರೆ ಜಿಲ್ಲಾ ಕ ಸಾ ಪ ಅಧ್ಯಕ್ಷ ಅಭ್ಯರ್ಥಿ ಬಿ. ವಾಮದೇವಪ್ಪಗೆ ನಾಗರಿಕರಿಂದ ಬೆಂಬಲ

ದಾವಣಗೆರ, ಏ.24;  ಶತಮಾನದ ಹೊಸ್ತಿಲನ್ನು ದಾಟಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿ ಬೆಳೆಸುವಲ್ಲಿ ಅಪಾರ ಅನುಭವ, ಗೌರವ,ಶ್ರದ್ಧೆ, ಕಾಳಜಿ, ಬದ್ಧತೆ ಹೊಂದಿರುವ ಕನ್ನಡದ ಪರಿಚಾರಕ ಹಾಗೂ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಕಳೆದ ಮೂರು ದಶಕಗಳಿಂದಲೂ ನಿಕಟ ಸಂಪರ್ಕ ಹೊಂದಿರುವ ಅದರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸರಳ ಸಜ್ಜನಿಕೆಯ ಕ್ರಿಯಾಶೀಲ, ಮೇರು ವ್ಯಕ್ತಿತ್ವದ ಬಿ ವಾಮದೇವಪ್ಪ ನವರನ್ನು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನಾಗಿ ಅತ್ಯಂತ ಬಹುಮತದಿಂದ ಆಯ್ಕೆ ಮಾಡೋಣ ಎಂದು ಮಾಗನೂರು ಬಸಪ್ಪ ಸಮಾಧಿ ಕಟ್ಟೆ ಬಳಗದ ಸದಸ್ಯರು ಹಾಗೂ ತರಳಬಾಳು ಬಡಾವಣೆಯ  ಪರಿಷತ್ತಿನ ಆಜೀವ ಸದಸ್ಯ ನಾಗರೀಕ ಬಂಧುಗಳು  ಒಕ್ಕೊರಲಿನಿಂದ ಘೋಷಿಸಿದರು.ದಾವಣಗೆರೆ ತಾಲೂಕು ಅಧ್ಯಕ್ಷರಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಕನ್ನಡ ನುಡಿ ಜಾತ್ರೆಯನ್ನು ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ,ದತ್ತಿ ಕಾರ್ಯಕ್ರಮಗಳು, ಪ್ರತಿಭಾ ಪುರಸ್ಕಾರ,  ಸಾಹಿತ್ಯ ಸಮ್ಮೇಳನ ಗಳಂತಹ ಕನ್ನಡಪರ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಕನ್ನಡ ನಾಡು -ನುಡಿ, ಜಲ -ನೆಲ, ಕನ್ನಡ ಸಾಹಿತ್ಯದ ಜ್ಞಾನವನ್ನು ಪಸರಿಸಿದ ಕೀರ್ತಿಗೆ ಭಾಜನರಾದವರು ಬಿ ವಾಮದೇವಪ್ಪ ನವರು ಎಂದು ಅಲ್ಲಿ ನೆರೆದ ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
 ಕೋವಿಡ್ 19  ಅಂತಹ ಸಂದರ್ಭದಲ್ಲೂ ಕನ್ನಡ ಸೇವೆಯನ್ನು ಮಾಡುವಲ್ಲಿ ಹಿಂದೆ ಬೀಳದೆ 2020ರ ನವಂಬರ್ ತಿಂಗಳ ಪೂರ್ತಿ ಅಂತರ್ಜಾಲದ ಮೂಲಕ “ಕನ್ನಡ ನುಡಿ ಹಬ್ಬ “ ಕಾರ್ಯಕ್ರಮದ ಮೂಲಕ ಕನ್ನಡದ ಕಂಪನ್ನು ನಾಡು,ದೇಶ ಹಾಗೂ ವಿಶ್ವದ ಮೂಲೆ ಮೂಲೆಗಳಿಗೂ ಅತ್ಯಂತ ಯಶಸ್ವಿಯಾಗಿ ಪಸರಿಸಿದ ಕೀರ್ತಿಗೆ ಭಾಜನರಾದವರು  ಬಿ. ವಾಮದೇವಪ್ಪ ನವರು. ಇಂಥವರು ದಾವಣಗೆರೆ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥ್ಯವನ್ನು ವಹಿಸಿಕೊಂಡರೆ ಕನ್ನಡ ನುಡಿ ಸೇವೆಯನ್ನು ಇನ್ನೂ ಹೆಚ್ಚು ಹೆಚ್ಚು ಅರ್ಥಪೂರ್ಣವಾಗಿ ಮಾಡಬಲ್ಲರು ಅಂತಹ ಸಾಮರ್ಥ್ಯ ಬಿ. ವಾಮದೇವಪ್ಪ ಅವರಲ್ಲಿದೆ, ಅದಕ್ಕಾಗಿ ಅವರು ಅಧ್ಯಕ್ಷ ಸ್ಥಾನಕ್ಕೆ ಸಮರ್ಥರಾಗಿದ್ದಾರೆ ಎಂದು ಅಲ್ಲಿನ ಕನ್ನಡ ಬಂಧುಗಳು ತಮ್ಮಅಭಿಲಾಷೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಗನೂರು ಬಸಪ್ಪ ಸಮಾಧಿ ಕಟ್ಟೆಯ ಬಳಗದ ಸದಸ್ಯರುಗಳಾದ ಎನ್.ಜಿ.ಪುಟ್ಟಸ್ವಾಮಿ, ಲೋಕಿಕೆರೆ ಕೆಂಚಪ್ಪ, ಮಹೇಶ್ವರಯ್ಯ ಸಿದ್ದನೂರು, ಕೆ. ನಾಗಪ್ಪ, ಕೆಂಚನಗೌಡ್ರ, ಕೆ.ಎಂ.ಶಿವಮೂರ್ತಿ, ಪ್ರೊ.ಎಸ್.ಬಿ.ರಂಗನಾಥ್, ಎ.ಆರ್.ಉಜ್ಜಿನಪ್ಪ, ಡಾ.ಹೆಚ್.ವಿ.ವಾಮದೇವಪ್ಪ, ಕೆ.ಕೊಟ್ರಪ್ಪ, ಬಿ.ಎಂ.ಮುರಿಗಯ್ಯ,ಎಸ್.ಆರ್.ಶಿರಗುಂಬಿ, ಡಾ.ಕೆ.ಟಿ.ನಾಗರಾಜ್ ನಾಯ್ಕ್, ಕೆ.ರಾಘವೇಂದ್ರ ನಾಯರಿ, ಗಣೇಶ್ ಶೆಣೈ,ಬೇಳೂರು ಸಂತೋಷ್ ಕುಮಾರ್ ಶೆಟ್ಟಿ,ಶ್ರೀಮತಿ ಎ.ಜಿ.ಸುಮತಿ ಜಯಪ್ಪ, ಶ್ರೀಮತಿ ಪರಿಮಳ ಜಗದೀಶ್, ಶ್ರೀಮತಿ ಪಂಕಜಾಕ್ಷಿ ಬಕ್ಕೇಶ್, ಆರ್.ಶಿವಕುಮಾರ್, ಬಿ.ದಿಳ್ಳೆಪ್ಪ, ಉಜ್ಜಿನಪ್ಪಶ್ಯಾಗಲೆ, ಎಂ.ಎಸ್.ಬಕ್ಕೇಶ್, ಬಿ..ಕೆ. ವೀರೇಶ್, ಎ.ಎನ್.ಜಯಪ್ಪ, ಎಸ್. ಜಿ. ಶಾಂತರಾಜ್, ಸಣ್ಣಪ್ಪ, ಶಾಂತಕುಮಾರ್, ಪಾಟೀಲ್ , ಜಗದೀಶ್ ಕೂಲಂಬಿ, ಡಾ.ಶಿವರಾಜ್ ಕಬ್ಬೂರ್ ಇದ್ದರು.