ದಾವಣಗೆರೆ ಕರಾಟೆಪಟುಗಳಿಗೆ ಪ್ರಶಸ್ತಿ

ದಾವಣಗೆರೆ.ಏ.೨೨; ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ದಾವಣಗೆರೆ ಕರಾಟೆ ಪಟುಗಳು ದರ್ಶನ್ ಟಿ. ಮೊದಲನೇ ಸ್ಥಾನ, ಗಣೇಶ್ ಕೆ.ಎಂ. ಮೊದಲನೇ ಸ್ಥಾನ, ಶಶಿಧರ ಕೆ.ಎಂ. ಮೊದಲನೇ ಸ್ಥಾನ, ರಾಕೇಶ್.ಎನ್. ದ್ವಿತೀಯ ಸ್ಥಾನ, ರಾಘವಿ ಎನ್.ಮೊದಲನೇ ಸ್ಥಾನ, ಸಾನವಿ ವಿ. ಮೊದಲನೇ ಸ್ಥಾನ, ವಂಶಿ, 3ನೇ ಸ್ಥಾನ, ತ್ರಿಶಾ ಎ. 3ನೇ ಸ್ಥಾನ,, ಸ್ಪೂರ್ತಿ ಆರ್. ಮೊದಲನೇ ಸ್ಥಾನ,, ಕ್ರಾಂತಿ ಎಚ್.ಆರ್. ದ್ವಿತೀಯ ಸ್ಥಾನ, ತನ್ಮಯ ಕೆ. ಮೊದಲನೇ ಸ್ಥಾನ, ನಮ್ರತಾ ವಿ. ಮೊದಲನೇ ಸ್ಥಾನ ಪಡೆದಿರುತ್ತಾರೆ. ಇವರು ನಗರಕ್ಕೆ ಕೀರ್ತಿ ತಂದಿದ್ದಾರೆ ಎಂದು ಸನ್‌ಶೈನ್ ನಜೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.