ದಾವಣಗೆರೆ ಕನ್ನಡ ಕುವರ-ಕುವರಿ” ಸ್ಪರ್ಧೆಯ ಫಲಿತಾಂಶ 

ದಾವಣಗೆರೆ-ನ.24;ದಾವಣಗೆರೆಯ ಲಯನ್ಸ್ ಕ್ಲಬ್ ನೇಸರ ಮತ್ತು ಕಲಾಕುಂಚ ಎಂ.ಸಿ.ಸಿ. ಬಡಾವಣೆ ಶಾಖೆಯ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ನಗರದ ದೇವರಾಜ ಅರಸು ಬಡಾವಣೆಯ ಲಯನ್ಸ್ ಭವನದಲ್ಲಿ 67ನೇ ವರ್ಷದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ಮಕ್ಕಳಿಗೆ ಏರ್ಪಡಿಸಲಾದ “ದಾವಣಗೆರೆ ಕನ್ನಡ ಕುವರ-ಕುವರಿ ಸ್ಪರ್ಧೆ”ಯ ಫಲಿತಾಂಶ ಈ ಕೆಳಗಿನಂತಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.ಕನ್ನಡ ಕುವರಿ ಪ್ರಥಮ : ಬಿಂಧು ಕೆ.ಎಸ್. ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ, ದ್ವಿತೀಯ ಸಮೀಕ್ಷಾ ಜಿ.ಎಂ. ಎಜು ಏಷ್ಯಾ ವಿದ್ಯಾಸಂಸ್ಥೆ, ತೃತೀಯ ಪ್ರೇರಣಾ ಎಂ.ಎಸ್. ಸೇಂಟ್‌ಪಾಲ್ಸ್ ಕಾನ್ವೆಂಟ್, ಕನ್ನಡ ಕುವರ ಪ್ರಥಮ ಪವನ್ ಎಸ್. ನ್ಯೂಡೆಲ್ಲಿ ವಿದ್ಯಾಸಂಸ್ಥೆ, ದ್ವಿತೀಯ ಗಣೇಶ್ ಎಸ್. ನಂದಗೋಕುಲ ವಿದ್ಯಾಸಂಸ್ಥೆ, ತೃತೀಯ ತೇಜಸ್ ಎಸ್. ಅಧಿಕಾರಿ ಲಯನ್ಸ್ ಪ್ರೌಢಶಾಲೆ. ಎಲ್ಲಾ ಬಹುಮಾನ ವಿಜೇತರಿಗೆ ತಲೆಯಮೇಲೆ ಕಿರೀಟವಿಟ್ಟು ಪುಷ್ಪವೃಷ್ಟಿ, ಸ್ಮರಣಿಕೆ ನೀಡಿ ಗೌರವಿವಿಸಿ, ಪ್ರಶಸ್ತಿಪತ್ರ, ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು ಎಂದು ಲಯನ್ಸ್ ಕ್ಲಬ್ ನೇಸರ ಮತ್ತು ಕಲಾಕುಂಚ ಎಂ.ಸಿ.ಸಿ. ಬಡಾವಣೆ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಪ್ರಭಾ ರವೀಂದ್ರ ತಿಳಿಸಿದ್ದಾರೆ.