ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯ ಉದ್ಘಾಟನೆ 

ದಾವಣಗೆರೆ :ಏಪ್ರಿಲ್ 20,  ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ನಾಗರಾಜ್ ಲೋಕಿಕೆರೆ ಅವರ ಚುನಾವಣಾ ಕಾರ್ಯಲಯವು ನಗರದಲ್ಲಿ ಇಂದು  ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾದ ಕಾಂತೇಶ್ ಅಮೃತೇಯ ಉದ್ಘಾಟಿಸಿದರು.ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯಲ್ಲಿರುವ ಈ ಚುನಾವಣಾ ಕಾರ್ಯಾಲಯದ ಶುಭಾರಂಭಕ್ಕೆ ಗುಜರಾತಿನ ಮೊರ್ಬಿ ಕ್ಷೇತ್ರದ ಶಾಸಕರು ಮತ್ತು  ಶಾಸಕರಾದ ಎಸ್.ಎ. ರವೀಂದ್ರನಾಥ್, ಹಿರಿಯ ಮುಖಂಡರಾದ ಡಾ. ಎ.ಹೆಚ್. ಶಿವಯೋಗಿಸ್ವಾಮಿ ಚಾಲನೆ ನೀಡಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಮುಖಂಡರುಗಳಾದ ಡಿ.ಹೆಚ್. ಶಿವಶಂಕರ್, ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.