ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಅವರು ಇಂದು ಬೆಳಗ್ಗೆ ಕೆಟಿಜೆ ನಗರದ ೧೭ ನೇ ಕ್ರಾಸ್ ನಲ್ಲಿ‌  ಪ್ರಚಾರ ನಡೆಸಿದರು.ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ‌ಪೂಜೆ ಸಲ್ಲಿಸಿದರು ನಂತರ ಕೆಬಿ ಬಡಾವಣೆ ಸೇರಿದಂತೆ ವಿವಿಧ ಭಾಗಗಳಲ್ಲಿ ಬಿರುಸಿನ ಮತ ಪ್ರಚಾರ ಕೈಗೊಂಡಿದ್ದರು.ಅವರೊಂದಿಗೆ ಬಿಜೆಪಿ‌  ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.