ದಾವಣಗೆರೆ ಇಸ್ಕಾನ್ ನಿಂದ ಕಾರ್ತಿಕಮಾಸದ ಕಾರ್ಯಕ್ರಮ


ದಾವಣಗೆರೆ. ನ.೪; ಕಾರ್ತಿಕ ಮಾಸದ ಪ್ರಯುಕ್ತ
ದಾವಣಗೆರೆಯ ಇಸ್ಕಾನ್ ವತಿಯಿಂದ ನಗರದ ಎಂಸಿಸಿ ಎ ಬ್ಲಾಕ್ ನಲ್ಲಿರುವ ಇಸ್ಕಾನ್ ಸತ್ಸಂಗ ಕೇಂದ್ರ ದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವಧೂತ ಚಂದ್ರದಾಸ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಈ ವರ್ಷ ವಿಶೇಷವಾಗಿದ್ದು ಇಸ್ಕಾನ್ ಸಂಸ್ಥಾಪಕರಾದ ಶ್ರೀಲ ಪ್ರಭುಪಾದರ 125 ನೇ ಸ್ಮರಣೋತ್ಸವ ನಡೆಯಲಿದೆ.ಈ ಪ್ರಯುಕ್ತ ಕೇಂದ್ರ ಸರ್ಕಾರ ವಿಶೇಷ ನಾಣ್ಯ ಬಿಡುಗಡೆ ಮಾಡಿದೆ ಎಂದರು.
ಕಾರ್ತಿಕ ಮಹೋತ್ಸವದ ಹಿನ್ನೆಲೆಯಲ್ಲಿ ನ.೬ ರಂದು ಬೆಳಗ್ಗೆ  ೧೧ ರಿಂದ ೧ ರವರೆಗೆ ಶ್ರೀ ಗೋವರ್ಧನ ಪೂಜೆ,ನ.೮ ರಂದು ಸಂಜೆ ೫ ಕ್ಕೆ ಶ್ರೀಲ ಪ್ರಭುಪಾದ ತಿರೋಭಾವ ಮಹೋತ್ಸವ, ನ.೧೩ ರ ಸಂಜೆ ೬ ಕ್ಕೆ ಕಾರ್ತಿಕ ದೀಪೋತ್ಸವ ನಡೆಯುತ್ತದೆ. ಪ್ರತಿನಿತ್ಯ ಸತ್ಸಂಗ ಕೇಂದ್ರದಲ್ಲಿ ಸಂಜೆ ೭ ಕ್ಕೆ ಶ್ರೀ ದಾಮೋದರ ಆರತಿ ನಡೆಯುತ್ತದೆ ಭಕ್ತಾಧಿಗಳು ಶ್ರೀಕೃಷ್ಣನಿಗೆ ತುಪ್ಪದದೀಪಾರತಿ ಮಾಡಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ಇದ್ದರು.