ದಾವಣಗೆರೆಯ ಸಿದ್ದರಾಮಯ್ಯೋತ್ಸವಕ್ಕೆ ಸಿರಿಗೇರಿಯಿಂದ 2ಬಸ್ ಜನ”   


ಸಿರಿಗೇರಿ ಆ3. ಕರ್ನಾಟಕ ರಾಜ್ಯದ ತುಂಬ ಸುದ್ದಿಯಾಗಿರುವ, ಒಂದು ರೀತಿಯಲ್ಲಿ ಕೇಂದ್ರ ಸರ್ಕಾರದ ರಾಜಕಾರಣಿಗಳೂ ತಿರುಗಿನೋಡುವಂತೆ ಪ್ರಮಖ ವಿಷಯವಾಗಿರುವ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟುಹಬ್ಬ ಆಚರಣೆಯ ದಾವಣಗೆರೆಯ ಸಿದ್ದರಾಮಯ್ಯೋತ್ಸವಕ್ಕೆ ಸಿರುಗುಪ್ಪ ತಾಲೂಕಿನ ಗ್ರಾಮೀಣ ಭಾಗದಿಂದ ನೂರಾರು ಬಸ್ಸುಗಳು ಇಂದು ಬೆಳಗಿನಜಾವದಿಂದ ಕಾಂಗ್ರೇಸ್ ಮುಖಂಡರನ್ನು ಕಾರ್ಯಕರ್ತರನ್ನು ತುಂಬಿಕೊಂಡು ಹೊರಟವು. ಹುಟ್ಟುಹಬ್ಬ ಆಚರಣೆಯ ನೆಪದಲ್ಲಿ ನಡೆಯುತ್ತಿರು ಕರ್ನಾಟಕದ ಕಾಂಗ್ರೇಸ್ ಪಕ್ಷದ ಬಲವನ್ನು ಪ್ರತಿಬಿಂಬಿಸುವ ದಾವಣಗೆರೆ ಕಾರ್ಯಕ್ರಮಕ್ಕೆ ಗ್ರಾಮೀಣ ಭಾಗದ ಮೂಲೆ ಮೂಲೆಗಳಿಂದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರ ಅಭಿಮಾನಿಗಳು, ಪಕ್ಷದ ಅಭಿಮಾನಿಗಳು ನಿನ್ನೆಯಿಂದಲೇ ದಾವಣಗೆರೆಗೆ ಹೋಗುವ ಬಸ್ಸುಗಳಲ್ಲಿ ತಮ್ಮ ಸೀಟುಗಳನ್ನು ಕಾಯ್ದಿರಿಸಿಕೊಂಡು ಇಂದು ಬೆಳಗಿನಜಾವದಲ್ಲಿಯೇ ಸಿದ್ದರಾಗಿ ಬಂದು ಬಸ್ಸುಗಳಲ್ಲಿ ಹತ್ತುತ್ತಿರುವುದು ಕಂಡುಬಂತು.
    ಇದೇವೇಳೆ ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ದೀನದಲಿತರ ಉದ್ಧಾರಕ ಸಿದ್ಧರಾಮಯ್ಯನವರು ಸರ್ವಜನಾಂಗದ ಶಾಂತಿಯನ್ನು ಬಯಸುವ ಯಾವತ್ತೂ ಧೀಮಂತ ರಾಜಕಾರಿಣಿಯಾಗಿದ್ದಾರೆ. ರಾಜ್ಯದಲ್ಲಿ ಎಷ್ಟೊ ಬಡಕುಟುಂಬಗಳು ಒಂದಿಲ್ಲೊಂದು ರೀತಿಯಲ್ಲಿ ಇವರು ಜಾರಿಗೆ ತಂದಿದ್ದ ಯೋಜನೆಗಳಿಂದ ಜೀವನ ಕಂಡುಕೊಂಡಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿ ಇಟ್ಟಿರುವ ಇವರ ರಾಜಕಾರಣವು ಈಗ 2ನೇ ಶಕೆ ಆರಂಭಿಸಬೇಕಿದೆ. ಈಗ ಆಳುತ್ತಿರುವ ಪಕ್ಷದಿಂದ ಜನರು ರೋಸಿಹೋಗಿದ್ದಾರೆ. ಬದಲಾವಣೆಯ ಗಾಳಿಬೀಸಿ ಕಾಂಗ್ರೇಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಾಗಿ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿಯುತ್ತೇವೆಂದು ತಿಳಿಸಿದರು. ಗ್ರಾಮದ ಮುಖಂಡರಾದ ಸಿ.ಎಂ.ನಾಗರಾಜಸ್ವಾಮಿ, ಬಿ.ಸೋಮಶೇಕರಪ್ಪ, ಬಿ.ನಾಗೇಂದ್ರಪ್ಪ, ಬಿ.ಮಲ್ಲಯ್ಯ, ರಾರಾವಿವೆಂಕಟೇಶ, ಬಡಾವಲಿಸಾಬ್, ಎಸ್.ಎಂ.ನಾಗರಾಜಸ್ವಾಮಿ, ಎಚ್.ಲಕ್ಷ್ಮಣ, ಕರಿಬಸಪ್ಪ, ಹಳ್ಳಿಮರದರುದ್ರಪ್ಪ, ಕೆ.ಶಿವಪ್ಪ, ಲಿಂಗನಗೌಡ, ಕೆ.ಷಣ್ಮೂಖ, ಕೆ.ಬಸವರಾಜ, ಸಲೀಮ್, ಹಳ್ಳೀಮರದಸೋಮೇಶ, ವಿ.ತಿಪ್ಪಯ್ಯ, ಕಾಳಿಎರ್ರೆಪ್ಪ, ಬಿ.ನಾಗರಾಜ, ಕೆ.ಶಂಕ್ರಪ್ಪ, ಎಚ್.ಹುಲುಗಪ್ಪ, ಹಾಗೂ ನೂರಾರು ಕಾರ್ಯಕರ್ತರು ಒಂದು ಬಸ್ಸಿನಲ್ಲಿ ಪ್ರಯಾಣಿಸಿದರೆ ಉಳಿದ ಮುಖಂಡರು ಕಾರ್ಯಕರ್ತರು ಇನ್ನೊಂದು ಬಸ್ಸಿನಲ್ಲಿದ್ದರು.

Attachments area