ದಾವಣಗೆರೆಯ ಎಂ.ಮನು, ಕೊಂಡಜ್ಜಿಯ ಎಸ್.ರಾಜಶೇಖರ್‌ಗೆ ಕರ್ನಾಟಕ ಛಾಯಾರತ್ನ ಪ್ರಶಸ್ತಿ ” ಪ್ರದಾನ

ದಾವಣಗೆರೆ, ಜೂ. 25: ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಕರ್ನಾಟಕ ವೀಡಿಯೋ ಮತ್ತು ಫೋಟೋ ಅಸೋಸಿಯೇಷನ್ ಸಂಭ್ರಮದೊAದಿಗೆ ಹಾಗೂ ಬೈಸೇಲ್ ಇಂಟ್ರಾಕ್ಷನ್ಸ್ ಪ್ರೆöÊವೇಟ್ ಲಿಮಿಟೆಡ್ ಅಲ್ಬಮ್ ಮತ್ತು ಡಿಜಿಟಲ್ ಇಮೇಜಿಂಗ್ ಪ್ರದರ್ಶನ ಸಹಯೋಗದಲ್ಲಿ ಫೋಟೋ ಟುಡೆ ವಸ್ತುಪ್ರದರ್ಶನ ನಡೆಯಿತು.ಕರ್ನಾಟಕ ವೀಡಿಯೋ ಮತ್ತು ಫೋಟೋ ಅಸೋಸಿಯೇಷನ್ ಕಳೆದ 20 ವರ್ಷಗಳಿಂದ ಈ ಸಂಸ್ಥೆಯು ರಾಜ್ಯದಲ್ಲಿರುವ ಫೋಟೋ ಮತ್ತು ವೀಡಿಯೋ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಪ್ರತಿ ವರ್ಷ ಕರ್ನಾಟಕ ಛಾಯಾರತ್ನ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾ ಬಂದಿದ್ದು,ಈ ಬಾರಿ ದಾವಣಗೆರೆ ಜಿಲ್ಲೆಯ  ಫೋಟೋ ಮತ್ತು ವೀಡಿಯೋಗ್ರಾರ‍್ಸ್ ಸಂಘದ ಅಧ್ಯಕ್ಷ ಎಂ.ಮನು ಹಾಗೂ ದಾವಣಗೆರೆ ಯೂತ್ ವೆಲ್‌ಫೇರ್ ಅಸೋಸಿಯೇಷನ್ ಸಂಸ್ಥಾಪಕ ಸಂಘಟನಾ ಕಾರ್ಯದರ್ಶಿ ಎಸ್.ರಾಜಶೇಖರ ಕೊಂಡಜ್ಜಿ ಇವರುಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜ “ಕರ್ನಾಟಕ ಛಾಯಾರತ್ನ ಪ್ರಶಸ್ತಿ” ಪ್ರದಾನ ಮಾಡಿದರು.ಈ ಸಂದರ್ಭದಲ್ಲಿ ಕೆ.ವಿ.ಪಿ. ಅಸೋಸಿಯೇಷನ್‌ನ ಬೆಂಜಮಿನ್, ಕೃಷ್ಣಪ್ಪ, ಜಗದೀಶ, ಬೈಸೆಲ್ ರಾಮ್‌ರಾವ್, ಛಾಯಾ ಸುದ್ದಿ ಸಂಪಾದಕರಾದ ಖಾಜಾಪೀರ್,  ಬಿ.ಮಂಜುನಾಥ,  ಎನ್.ಕೆ.ಕೊಟ್ರೇಶ, ಪತ್ರಿಕಾ ಛಾಯಾಗ್ರಾಹಕ ವಿಜಯಕುಮಾರ ಜೈನ್, ವೀರೇಶ, ಮನೋಜ್, ವಿನಾಯಕ ಇತರರು ಇದ್ದರು.