ದಾವಣಗೆರೆಯಲ್ಲಿ ೧೩೩ ಜನರಿಗೆ ಕೋರೊನಾ

ದಾವಣಗೆರೆ, ಏ.19:ಎರಡನೇ ಅಲೆಯ ಭೀತಿಯ ಮಧ್ಯೆಯೇ ಜಿಲ್ಲೆಯಲ್ಲಿ ಒಮ್ಮೆಗೆ ಹೊಸದಾಗಿ 133 ಪಾಸಿಟಿವ್ ಕೇಸ್ ವರದಿಯಾಗಿದ್ದು, ಸೋಂಕಿನಿಂದ ಗುಣಮುಖರಾದ 39 ಜನರು ಬಿಡುಗಡೆಯಾಗುವದರೊಂದಿಗೆ ಸಕ್ರಿಯ ಕೇಸ್‌ಗಳ ಸಂಖ್ಯೆ 597ಕ್ಕೆ ಬಂದು ತಲುಪಿದೆ.ಜಿಲ್ಲೆಯಲ್ಲಿ ಈವರೆಗೆ 23467 ಪಾಸಿಟಿವ್ ಕೇಸ್ ವರದಿಯಾಗಿದ್ದು, 264 ಜನರು ಸೋಂಕಿಗೆ ಬಲಿಯಾಗಿದ್ದು, 22606 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 597 ಸಕ್ರಿಯ ಕೇಸ್‌ಗಳಲ್ಲಿ ಸೋಂಕಿತರಿಗೆ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆ, ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ.ದಾವಣಗೆರೆ ನಗರ, ತಾಲೂಕಿನಲ್ಲಿ 96 ಪಾಸಿಟಿವ್ ಕೇಸ್ ಬಂದಿದ್ದು, 28 ಜನ ಬಿಡುಗಡೆಯಾಗಿದ್ದಾರೆ. ಹರಿಹರದಲ್ಲಿ 26 ಪಾಸಿಟಿವ್, 2 ಬಿಡುಗಡೆ, ಜಗಳೂರು 4 ಪಾಸಿಟಿವ್, 1 ಬಿಡುಗಡೆ, ಚನ್ನಗಿರಿ 2 ಪಾಸಿಟಿವ್, 3 ಬಿಡುಗಡೆ, ಹೊನ್ನಾಳಿ 2 ಪಾಸಿಟಿವ್, 2 ಬಿಡುಗಡೆ, ಅನ್ಯ ಜಿಲ್ಲೆಗಳಿಂದ 3 ಪಾಸಿಟಿವ್ ಕೇಸ್ ಬಂದಿದ್ದು, ಮೂರು ಜನ ಬಿಡುಗಡೆಯಾಗಿದ್ದಾರೆ.