ದಾವಣಗೆರೆಯಲ್ಲಿ ಮಾಂಸಕ್ಕಾಗಿ ಲಗ್ಗೆ

ದಾವಣಗೆರೆ. ಏ.೨೫; ಇಂದು ಮಹಾವೀರ ಜಯಂತಿ ಇರುವುದರಿಂದ ಪಾಲಿಕೆ ಮಾಂಸ ಮಾರಾಟಕ್ಕೆ ನಿಷೇಧ ಹೇರಿತ್ತು. ಆದರೆ, ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಮಾಂಸ ಮತ್ತು ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದರಿಂದ ಕುರಿ, ಕೋಳಿ ಮಾಂಸ ಮತ್ತು ಮೀನು ಮಾರಾಟ ಭಾನುವಾರ ಜೋರಾಗಿಯೇ ನಡೆಯಿತು.ಸೋಮವಾರದಿಂದ ಲಾಕ್‌ಡೌನ್ ವಿಧಿಸಬಹುದೆಂಬ ಆತಂಕದಲ್ಲಿರುವ ಜನರು, ಆಕಸ್ಮಾತ್ ಲಾಕ್‌ಡೌನ್ ಜಾರಿಯಾದರೆ, ಇನ್ನೆಷ್ಟು ದಿನ ಬಾಡೂಟದಿಂದ ದೂರ ಉಳಿಯಬೇಕಾಗುತ್ತದೋ ಎಂಬ ಕಾರಣಕ್ಕೆ ಭಾನುವಾರ ಬೆಳ್ಳಂ, ಬೆಳಿಗ್ಗೆಯೇ ನಗರದ ಮಟನ್ ಮತ್ತು ಫಿಶ್ ಮಾರ್ಕೇಟ್‌ಗೆ ಜನರು ಲಗ್ಗೆ ಇಟ್ಟಿದ್ದರು. ಹೀಗಾಗಿ ಇಲ್ಲಿಯೂ ಸಾಮಾಜಿಕ ಅಂತರ ಪಾಲನೆಯಾಗಲಿಲ್ಲ. ಹೀಗಾಗಿ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಾಕೀತು ಮಾಡಿ. ಮಾರ್ಗಸೂಚಿ ಪಾಲನೆ ಆಗುವಂತೆ ನೋಡಿಕೊಂಡರು.