ದಾವಣಗೆರೆಯಲ್ಲಿ ಮತದಾರರ ಪಟ್ಟಿಯ ಮಾಸ್ ಡಿಲಿಟೇಷನ್; ಕಾಂಗ್ರೆಸ್ ಆರೋಪ

ದಾವಣಗೆರೆ. ನ.೧೯; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿರುವ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕುವ ಮತ್ತು ಸೇರ್ಪಡೆಯ ಗೊಂದಲ ದಾವಣಗೆರೆ ನಗರ ವ್ಯಾಪ್ತಿಯಲ್ಲಿಯೂ ನಡೆದಿರುವುದು ಬೆಳಕಿಗೆ ಬಂದಿದ್ದು, ಪ್ರತಿ ವಾರ್ಡ್‌ ಮಟ್ಟದಲ್ಲಿ ಅನೇಕರ ಡಿಲಿಟೇಷನ್‌ ನಡೆದಿದೆ . ಇದೊಂದು ರಾಜಕೀಯ ಪ್ರೇರಿತವಾಗಿದ್ದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಪಾಲಿಕೆ ಸದಸ್ಯ ಎ.ನಾಗರಾಜ್ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಮತದಾನದ ಹಕ್ಕು ಇರುತ್ತದೆ. ಅಂತಹದರಲ್ಲಿ ಅವರ ಗಮನಕ್ಕೆ ತರದೇ ಮತದಾರರ ಪಟ್ಟಿಯಲ್ಲಿ ಹೆಸರನ್ನು ತೆಗೆದು ಹಾಕಿದ್ದು, ಮತದಾನದ ದಿನ ಅವರು ಬಂದಾಗ ಪರದಾಡುವ ಹಾಗೆ ಮಾಡಿದ್ದಾರೆ.
ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕುವ ಮುನ್ನ ಆ ಮತದಾರನ ಹೇಳಿಕೆಯನ್ನು ಪಡೆದು ಅವರಿಂದ ಫಾರಂ-7 ನ್ನು ಭರ್ತಿ ಮಾಡಿ ಸಹಿ ಪಡೆದು ನಂತರ ಡಿಲೀಟ್ ಮಾಡಬೇಕು. ಬಹಳಷ್ಟು ಜನ ಕೂಲಿ ಕಾರ್ಮಿಕರು ಬೆಳಗ್ಗೆ 7-00 ಗಂಟೆಗೆ ಕೆಲಸಕ್ಕೆ ಹೋದರೆ ಸಂಜೆ ಮನೆಗೆ ಬರುವರು. ಅಂತಹವರ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ,ಇಲ್ಲವೋ ಎಂಬುದನ್ನು ಪರಿಶೀಲಿಸಲು ಆಗುವುದಿಲ್ಲ. ಅಂತಹವರ ಹೆಸರು ಡಿಲಿಟ್ ಆಗಿದ್ದು, ಡಿಲೀಟ್ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಇಂತಹ ಘಟನೆಗಳು ಆಗದ ರೀತಿ  ಜಿಲ್ಲಾಧಿಕಾರಿಗಳು ಗಮಿಸಬೇಕು ಹಾಗೂ ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವ ಹೆಸರನ್ನು ಪುನಃ ಸೇರ್ಪಡೆಗೊಳಿಸಬೇಕು.ಈಗ ಆಧಾರ್ ಕಾರ್ಡ್ ಮತ್ತು ಚುನಾವಣಾ ಗುರುತಿನ ಚೀಟಿ ಜೋಡಣಿ ಮಾಡುತ್ತಿದ್ದು, ಬಿಎಲ್.ಓ.ಗಳು ವಾರ್ಡ್‌ಗಳಲ್ಲಿ ಮತದಾರರಿಗೆ ಲಿಂಕ್ ಮಾಡದೇ ಹೋದರೆ ಓಟು ಡಿಲೀಟ್ ಆಗುತ್ತದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದು, ಅಂತವರ ವಿರುದ್ಧ ಕ್ರಮ ವಹಿಸಬೇಕು. ಪರಿಷ್ಕೃತ ಪಟ್ಟಿಯಲ್ಲಿ ಡಿಲಿಟೇಷನ್ ಎಂದು ತಿಳಿಸದೇ ಬಹಳಷ್ಟು ಮತದಾರರ ಹೆಸರು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ‌.ವಿನೋಬನಗರದ ವಾರ್ಡ್ ನಲ್ಲಿ ೧೦ ವಾರ್ಡ್ ನಿಂದ ಸುಮಾರು ೧೭೧೮ ಜನರ ಪಟ್ಟಿಯನ್ನು ಡಿಲೀಟ್ ಮಾಡಲಾಗಿದೆ‌ ಎಂದು‌ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಪಾಲಿಕೆ‌ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್, ಇನೇಶ್ ಕೆ.ಶೆಟ್ಟಿ, ಅಬ್ದುಲ್ ಲತೀಫ್,ಆಯೂಬ್ ಪೈಲ್ವಾನ್,ಸತೀಶ್,ಚಮನ್ ಖಾನ್,ಅಹಮದ್ ಖಾನ್,ಸಿದ್ದೀಕ್ ಮತ್ತಿತರರಿದ್ದರು.