ದಾವಣಗೆರೆಯಲ್ಲಿ ನೂರಾರು ವರ್ಷ ಹಳೇಯ ಕ್ಯಾಮರಗಳ ಪ್ರದರ್ಶನಕ್ಕೆ ಚಾಲನೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.18: ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ದಾವಣಗೆರೆಯ ಜಿಲ್ಲಾ ಗುರುಭವನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ  ಸ್ವಾತಂತ್ರ್ಯ ಪೂರ್ವದಿಂದ  ಇಂದಿನವರೆಗಿನ ಕ್ಯಾಮರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಪ್ರದರ್ಶನದಲ್ಲಿ ಗಾಂಧೀಜಿಯವರ ಚಿತ್ರ ಸೆರೆಹಿಡಿದಿದ್ದ ಕ್ಯಾಮರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.ಈ ಪ್ರದರ್ಶನವು ಸಾರ್ವಜನಿಕರ, ವಿದ್ಯಾರ್ಥಿಗಳ ಗಮನ ಸೆಳೆಯಿತು. ವಿಶೇಷವಾಗಿ 1942 ರಲ್ಲಿ ಮಹಾತ್ಮ ಗಾಂಧೀಜಿಯವರು ದಾವಣಗೆರೆಗೆ ಆಗಮಿಸಿದ್ದ ವೇಳೆ ಅವರ ಚಿತ್ರವನ್ನು ಸೆರೆಹಿಡಿದಿದ್ದ ಕ್ಯಾಮರ ಆಕರ್ಷಣೆಯ ಕೇಂದ್ರವಾಗಿತ್ತು.ಹಿರಿಯ ಛಾಯಾಗ್ರಹಕ ಎಚ್.ಬಿ.ಮಂಜುನಾಥ್ ಕ್ಯಾಮರಗಳ ಬಗ್ಗೆ ಮಾಹಿತಿ ನೀಡಿದರು.1920 ರಿಂದ 2023 ನೇ ಇಸವಿವರೆಗಿನ 120 ಕ್ಕೂ ಹೆಚ್ಚು ಬಗೆಯ ಕ್ಯಾಮರಗಳು ಪ್ರದರ್ಶನದಲ್ಲಿದ್ದವು.