ದಾವಣಗೆರೆಯಲ್ಲಿ ನಡೆಯುವ ‘ಸಿದ್ಧರಾಮೋತ್ಸವಕ್ಕೆ’ ಕಾಳಗಿ ತಾಲೂಕು ಕುರುಬ ಸಮಾಜ ಸಜ್ಜು

ಕಾಳಗಿ.ಜು.23 : ಹಿಂದೂಳಿದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರಿಗೆ 75 ವಸ್ತುಗಳು ತುಂಬಿದ ಪ್ರಯುಕ್ತ ಬರುವ ಅಗಸ್ಟ್ ತಿಂಗಳ 3ನೇ ತಾರಿಕಿನಂದು ದಾವಣಗೇರೆಯಲ್ಲಿ ಬಹು ಅದ್ಧೂರಿಯಾಗಿ ನಡೆಯುವ ಸಿದ್ಧರಾಮೋತ್ಸವ ಸಮಾರಂಭಕ್ಕೆ ಕಾಳಗಿ ತಾಲೂಕಿನಿಂದ ಸುಮಾರು 2,000ಜನ ಭಾಗಿಯಾಗುವ ಸಂಕಲ್ಪ ಮಾಡಿರುವುದಾಗಿ ಕಾಳಗಿ ತಾಲೂಕು ಕುರುಬ ಸಮಾಜದ ಮುಖಂಡರು ಸೇರಿಕೊಂಡು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

 ತಾಲೂಕು ಕುರುಬ ಸಮಾಜದ ಮುಖಂಡರೆಲ್ಲರೂ ಸೇರಿಕೊಂಡು ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆಸಿರುವ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದರು.
 ಸಿದ್ಧರಾಮಯ್ಯನವರು, ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಪ್ರಕಾರದ ಜಾತಿ, ಧರ್ಮ, ಮತ, ಪಂಥವೆನ್ನದೆ ಸರ್ವರನ್ನು ಸಮಾನತೆಯನ್ನು ಕಂಡು ಸುಭದ್ರ ಆಡಳಿತ ನೀಡಿದ ಅವರಿಗೆ 75 ವರ್ಷ ತುಂಬುತ್ತಿರುವ ಸುಭಗಳಿಗೆಯಲ್ಲಿ ದಕ್ಷ ಆಡಳಿತಗಾರರಾಗಿರುವ ಸಿದ್ಧರಾಮಯ್ಯ ನವರಿಗೆ ಮತ್ತಷ್ಟು ಪುಷ್ಟಿ ತುಂಬುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಎಂದು ಸಮಾಜ ಮುಖಂಡರು,  ಈ ಭಾಗದ ಅವರು ಅಭಿಮಾನಿ ಬಳಗದವರು ತಮ್ಮ ಸ್ವಂತ ಖರ್ಚಿನಲ್ಲಿ ಸಮಾವೇಶದಲ್ಲಿ ಭಾಗಿಯಾಗುವ ಮೂಲಕ ಅವರಿಗೆ ಹೆಚ್ಚಿನ ಶಕ್ತಿ ನೀಡಲು ಸಜ್ಜಾಗಿದ್ದೇವೆ ಎಂದರು.
 ಕಾಂಗ್ರೆಸ್ ಹೈಕಮಾಂಡ್ ಗಳು ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಒಂದರಂತೆ ಬಸ್ಸಿನ ವ್ಯವಸ್ಥೆ ಮಾಡಿದ್ದು, ಆ ಬಸ್ಸುಗಳು ಈ ಭಾಗದ ಜನತೆಗೆ, ಅಭಿಮಾನಿಗಳಿಗೆ ಸಾಲದಾಗಿರುವ ಕಾರಣ ಸಮಾಜದ ಪ್ರಮುಖರೇಲ್ಲರೂ ಸೇರಿ ಸ್ವಂತ ಖರ್ಚಿನಲ್ಲಿ ದಾವಣಗೇರೆ ಸಮಾವೇಶಕ್ಕೆ ತೆರಳಲು ಸಜ್ಜಾಗಿರುವುದಾಗಿ ತಿಳಿಸಿದರು.
  ಸಮಾವೇಶಕ್ಕೂ ಒಂದು ದಿನ ಮುಂಚಿತವಾಗಿ ಅಂದರೆ 2ನೇ ಅಗಸ್ಟ್ ರಂದು ಕಾಳಗಿ ತಾಲೂಕಿನ ಕುರುಬ ಸಮಾಜದ ಮುಖಂಡರೆಲ್ಲರೂ ಪಟ್ಟಣದ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ಸೇರಿಕೊಂಡು ದಾವಣಗೇರೆ ಸಮಾವೇಶಕ್ಕೆ ತೆರಳಲು ಸಜ್ಜಾಗಿದ್ದು, ಕುರುಬ ಸಮಾಜದ  ಜನತೆ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಾಲೂಕು ಕುರುಬ ಸಮಾಜ ಮುಖಂಡರು ಕರೆನೀಡಿದರು.
 ಕುರುಬ ಸಮಾಜದ ತಾಲೂಕು ಹಿರಿಯ ಮುಖಂಡ ರೇವಣಸಿದ್ದಪ್ಪ ಅರಣಕಲ್, ಸಿದ್ದಪ್ಪ ದಸ್ತಾಪೂರ, ರವೀಂದ್ರ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ ತೇಂಗಳಿ, ಜಗನ್ನಾಥ ಪೂಜಾರಿ ತೇಗಲತಿಪ್ಪಿ, ಹುವಣ್ಣ ಪೂಜಾರಿ, ರೇವಣಸಿದ್ದ ಸುಗೂರ, ಶಾಂತಗೌಡ ಪಾಟೀಲ ಅಶೋಕನಗರ, ನಾಗಪ್ಪ ಪೂಜಾರಿ, ಬಾಬು ಪೂಜಾರಿ, ಸಿದ್ದು ಪೂಜಾರಿ, ಶಿವರಾಜ ಪೂಜಾರಿ, ಶಾಮರಾಯ, ಬೀರಪ್ಪ, ರಾಜಪ್ಪ, ಮಂಜುನಾಥ ಸೇರಿದಂತೆ ಅನೇಕರಿದ್ದರು.