ದಾವಣಗೆರೆಯಲ್ಲಿ ಧಾರಣ ಮಾತೃಕೆ ಯೋಗ ತರಗತಿ ಪ್ರಾರಂಭ

ದಾವಣಗೆರೆ.ಜು.೧೮:  ಏಷಿಯನ್ ಇನಿಸ್ಟಿಟ್ಯೂಟ್ ಆಫ್ ಮಿಡ್ ಬ್ರೇನ್ ಯೋಗ ವತಿಯಿಂದ ಧಾರಣ ಮಾತೃಕೆ  ಯೋಗ  ತರಗತಿಗಳನ್ನು ಪ್ರತಿ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ಗಂಟೆವರೆಗೆ ದಾವಣಗೆರೆ ಬಿ.ಟಿ. ಲೇಔಟ್ ನಲ್ಲಿರುವ ಮಹೇಶ್ ಪಾಲಿ ಕ್ಲಿನಿಕ್ ನಲ್ಲಿ ನಡೆಸಲಾಗುವುದು ಎಂದು ವೈ. ಆನಂದ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗ ಜಗತ್ತಿನ ಪ್ರಾಚೀನ  ಪದ್ಧತಿಯಾಗಿದ್ದು 64 ವಿದ್ಯೆಗಳನ್ನು ಒಳಗೊಂಡಿದೆ . ಅಷ್ಟಾಂಗ ಯೋಗಗಳಲ್ಲಿ ಒಂದಾದ ಧಾರಣ ಮಾತೃಕೆ ಯೋಗ , ಮಕ್ಕಳಲ್ಲಿ ನೆನಪಿನ ಶಕ್ತಿ , ಏಕಾಗ್ರತೆ , ಸಚಿತ್ರ ನೆನಪು , ಆತ್ಮವಿಶ್ವಾಸ , ಗ್ರಹಿಸಿಕೊಳ್ಳುವ ಸಾಮರ್ಥ್ಯ , ಸಕಾರತ್ಮಕ ಆಲೋಚನೆ , ತಾರ್ಕಿಕ ಆಲೋಚನೆ , ಮೆದುಳಿನ ಎಡ ಮತ್ತು ಬಲ ಭಾಗಗಳ ಸಮತೋಲನ ಮತ್ತು ಸುಪ್ತ ಮನಸ್ಸನ್ನು ಜಾಗೃತಗೊಳಿಸುತ್ತದೆ ಎಂದರು.ಮಕ್ಕಳಲ್ಲಿ ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸಿ ಮತ್ತು ದೈಹಿಕವಾಗಿ ಮಾನಸಿಕವಾಗಿ ಭಾವನಾತ್ಮಕ ಹಾಗೂ ಆಧ್ಯಾತ್ಮಿಕವಾಗಿ ಅಭಿವೃದ್ಧಿಗೊಳಿಸುವುದರ ಜೊತೆಗೆ ಪಂಚೇಂದ್ರಿಯಗಳಿಗೆ ತರಬೇತಿಯನ್ನು ನೀಡಲಾಗುವುದು.ಕಣ್ಣು ಮುಚ್ಚಿದರೂ ಕೂಡ ಬಣ್ಣಗಳನ್ನು, ಆಕಾರಗಳನ್ನು, ಚಿತ್ರಗಳನ್ನು ಗುರುತಿಸುವುದು , ನೋಟಿನಲ್ಲಿರುವ ಸಂಖ್ಯೆಗಳನ್ನು ಓದುವುದು, ಎಸ್ ಎಂಎಸ್ ಓದುವುದನ್ನು ಕಲ್ಪಿಸಲಾಗುವುದು ಎಂದರು.ಈ ಮಿಡ್ ಬ್ರೇನ್‌ ಯೋಗವನ್ನು 2008 ರಿಂದ ಬಾಗಲಕೋಟೆಯಲ್ಲಿ ಕಲಿಸುತ್ತಾ ಬಂದಿದ್ದು , ಸಾವಿರಾರು ಮಕ್ಕಳು ಇದರ ಉಪಯೋಗವನ್ನು ಪಡೆದಿರುತ್ತಾರೆ.ಈ ಒಂದು ತರಬೇತಿಯಲ್ಲಿ ವಿಶೇಷವಾಗಿ ಓಂಕಾರ , ಭ್ರಾಮರಿ ಪ್ರಾಣಾಯಾಮ ಮತ್ತು ಮೆದುಳಿಗೆ ಸಂಬಂಧಪಟ್ಟ ಯೋಗಗಳನ್ನು ಕಲಿಸುತ್ತೇವೆ . ಬಾಗಲಕೋಟೆಯ ವಏಷಿಯನ್ ಇನಿಸ್ಟಿಟ್ಯೂಟ್ ಆಫ್ ಮಿಡ್ ಬ್ರೇನ್ ಯೋಗ ಕಲಿಸುತ್ತಾ ಬಂದಿದೆ  ಎಂದರು.ಏಷಿಯನ್ ಇನಿಸ್ಟಿಟ್ಯೂಟ್ ಆಫ್ ಮಿಡ್ ಬ್ರೇನ್ ಯೋಗ ಈಗ ದಾವಣಗೆರೆಯ ಮಕ್ಕಳ ಒಳಿತಿಗಾಗಿ ನಮ್ಮ ಯೋಗ ಸಂಸ್ಥೆಯನ್ನು  ಶ್ರೀ  ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ಪುರವರ್ಗ ಹಿರೇಮಠ ಶ್ರೀಕ್ಷೇತ್ರ ಆವರಗೊಳ್ಳ ದಾವಣಗೆರೆ ಇವರುಗಳ ನೇತೃತ್ವದಲ್ಲಿ ಹಾಗೂ ಡಾ.ಮಹೇಶ್ ಇವರ ಸ್ಥಳದಲ್ಲಿ ಪ್ರಾರಂಭಿಸಿರುತ್ತೇವೆ.ಇದರ ಸದುಪಯೋಗವನ್ನು ಪಾಲಕ ಬಂಧುಗಳು ಮತ್ತು ವಿದ್ಯಾರ್ಥಿಗಳು ಪಡೆದುಕೊಳ್ಳಿರಿ ಎಂದರು.ಹೆಚ್ಚಿನ ಮಾಹಿತಿಗಾಗಿ 9108066295 ಸಂಪರ್ಕಿಸಬಹುದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆವರಗೊಳ್ಳ ಪುರವರ್ಗಮಠದ ಶ್ರೀ ಓಂಕಾರ ಸ್ವಾಮಿಗಳು, ಡಾ. ಮಹೇಶ್, ಡಾ ಸೀಮಾ ಉಪಸ್ಥಿತರಿದ್ದರು.ಹಾಗೂ ಈ ವಿಶೇಷ ಯೋಗವನ್ನು ಕಲಿತಿರುವ ಮಕ್ಕಳಾದ ಎಂ.ಹೆಚ್. ಇಂಪನಾ,  ಎಂ.ಹೆಚ್. ಶರ್ವಿನ್ ಯೋಗ ಪ್ರಾತ್ಯಕ್ಷಿಕೆ ನೀಡಿದರು.