ದಾವಣಗೆರೆಯಲ್ಲಿ ಜ.6 ರಿಂದ ಮಹಿಳಾ ಸಮ್ಮೇಳನ


ಸಂಜೆವಾಣಿ ವಾರ್ತೆ
ಹೊಸಪೇಟೆ, ಜ.03: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‍ಎಸ್)ವತಿಯಿಂದ ದಾವಣಗೆರೆಯಲ್ಲಿ ಜ. 6 ಮತ್ತು 7 ರಂದು ಏಳನೇ ರಾಜ್ಯ ಮಹಿಳಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಎಂ.ಎನ್.ಮಂಜುಳಾ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವುದು, ಶಿಕ್ಷಣ, ಉದ್ಯೋಗ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ದುಡಿಯುವ ಮಹಿಳೆಯರಿಗೆ ಕನಿಷ್ಠ ವೇತನ, ಸೇವಾ ಭದ್ರತೆ ಸೇರಿ 12 ಹಕ್ಕೊತ್ತಾಯಗಳನ್ನು ಮೀಸಲಾಗುವುದು ಎಂದು ವಿವರಿಸಿದರು.
ಎಐಎಂಎಸ್‍ಎಸ್ ನೊಂದ ಮಹಿಳೆಯರ ಧ್ವನಿಯಾಗಿ ದೇಶದಾದ್ಯಂತ ಹೋರಾಟಗಳನ್ನು ಸಂಘಟಿಸುತ್ತ ಬಂದಿದೆ. ದಾವಣಗೆರೆಯ ಸಮ್ಮೇಳನದಲ್ಲಿ ಜಿಲ್ಲೆ ಸೇರಿದಂತ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 2,500ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಪ್ರಮುಖರಾದ ಮಂಜುಳಾ ಡೊಳ್ಳಿ, ಶಿವಮ್ಮ, ಅಭಿಲಾಷ್ ಹಾಗೂ ಯಶೋಧಾ ಉಪಸ್ಥಿತರಿದ್ದರು.