ದಾವಣಗೆರೆಯಲ್ಲಿ ಚಿತ್ರಸಂತೆಯ ಸಂಭ್ರಮ

ದಾವಣಗೆರೆ.ಫೆ.೨೬: ದಾವಣಗೆರೆಯಲ್ಲಿ ಆಯೋಜಿಸಲಾಗಿರುವ ಚಿತ್ರ ಸಂತೆ ಇಡೀ ನಮ್ಮ ರಾಜ್ಯವೇ ಹೆಮ್ಮೆ ಪಡುವಂತಹ ಚಿತ್ರಸಂತೆಯಾಗಿದ್ದು ಇಲ್ಲಿ ನಮ್ಮ ಕಲ್ಪನೆಗಳಿಗೂ ಮೀರಿದ ನಮ್ಮ ನಿರೀಕ್ಷೆಗೂ ಮೀರಿದಂತಹ ಚಿತ್ರಕಲಾ ಪ್ರಕಾರಗಳು ಪ್ರದರ್ಶನಗೊಳ್ಳುತ್ತಿದ್ದು ಇದು ನಿಜಕ್ಕೂ ನಮ್ಮ ದಾವಣಗೆರೆಯ ಹೆಮ್ಮೆಯ ವಿಷಯ ಎಂದು ಮಾಜಿ ಮೇಯರ್ ಹಾಗೂ ಚಿತ್ರಕಲಾ ಪರಿಷತ್ತಿನ ಬಿಜಿ ಅಜಯ್ ಕುಮಾರ್ ತಿಳಿಸಿದರು.ನಗರದ ಅಕ್ಕಮಹಾದೇವಿ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಚಿತ್ರ ಸಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಾವಣಗೆರೆಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಆಯೋಜನೆ  ಮಾಡಿದರೂ ಅವು ಯಶಸ್ಸುಗೊಳುತ್ತವೆ. ಈ ನಿಟ್ಟಿನಲ್ಲಿ ನಾವು ಈಗ ಎರಡನೇ ವರ್ಷ ದಾವಣಗೆರೆಯಲ್ಲಿ ಚಿತ್ರ ಸಂತೆಯನ್ನು  ಇಲ್ಲಿ ನಡೆಯುತ್ತಿರುವ ಚಿತ್ರ ಸಂತೆಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ ಎಂದರು.ಬಿಇಒ ಧಾರುಕೇಶ್ ಮಾತನಾಡಿ, ನಮ್ಮ ಮನಸ್ಸು ಹೇಗಿರುತ್ತೋ ಜಗತ್ತು ಹಾಗೆ ಕಾಣುತ್ತದೆ. ಈ ನಿಟ್ಟಿನಲ್ಲಿ ಕಲಾವಿದರ ಮನಸ್ಸಿನಲ್ಲಿರುವ ಕಲೆಯನ್ನು ಯಥಾವತ್ತಾಗಿ ಮೂಡಿಸಲಾಗುತ್ತದೆ. ಕಲೆ ಯಾರ ಸ್ವತ್ತಲ್ಲ ಸಾಧಕನ ಸ್ವತ್ತು. ಕಲೆ ಕಲಾವಿದ ಮನಸ್ಸಿನಲ್ಲಿ ಹುಟ್ಟುತ್ತದೆ ಎಂದು ಹೇಳಿದರು ಕಾರ್ಯಕ್ರಮವನ್ನು ಸಂಸದ ಜಿಎಂ ಸಿದ್ದೇಶ್ವರ್ ಉದ್ಘಾಟಿಸಿದರು. ಈ ವೇಳೆ ಚಿತ್ರಕಲಾ ಪರಿಷತ್ತಿನ ಸದಾನಂದ ಹೆಗಡೆ, ಶೇಷಾಚಲ, ರವಿ ಹುದ್ಧಾರ, ಶ್ರೀನಿವಾಸ್, ವಿಜಯಕುಮಾರ್ ಜಾಧವ್,  ಶಾಂತಯ್ಯ ಪರಡಿಮಠ್, ಈಶ್ವರ್ ಸಿಂಗ್, ಶ್ರೀನಿವಾಸ್, ಶಿವರಾಜ್ ಇತರರು ಇದ್ದರು