
ದಾವಣಗೆರೆ.ಮೇ.೧೩: ಅತೀವ ಕುತೂಹಲ ಮೂಡಿಸಿದ್ದ ರಾಜ್ಯ ವಿಧಾನಸಭಾ ಏಳು ಕ್ಷೇತ್ರಗಳ ಮತ ಎಣಿಕೆ ಕಾರ್ಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆಯಿತು.ಜಿಲ್ಲಾಧಿಕಾರಿ ಗಳ ನೇತೃತ್ವದಲ್ಲಿ ಸ್ಟ್ರಾಂಗ್ ರೂಂ ಕೊಠಡಿ ತೆರೆಯಲಾಯಿತು.ಬಳಿಕವಿದ್ಯುನ್ಮಾನ ಮತಯಂತ್ರಗಳ ಎಣಿಕೆ ಕಾರ್ಯ ಎಂಟಕ್ಕೆ ಪ್ರಾರಂಭವಾಯಿತು. ಮೊದಲಿಗೆ ಅಂಚೆ ಮತಗಳು ಜೊತೆಗೆ ಇದೇ ಪ್ರಥಮ ಬಾರಿಗೆ ಎಂಭತ್ತು ವರ್ಷ ಮೇಲ್ಪಟ್ಟ ಹಿರಿಯರು, ವಿಕಲ ಚೇತನರು, ಕೊರೊನಾ ಬಾಧಿತರು ಚಲಾಯಿಸಿದಮತ ಎಣಿಕೆ ನಡೆಯಿತು.ಅಂಚೆ ಮತಗಳ ಎಣಿಕೆ ಕಾರ್ಯ ಪ್ರಾರಂಭದಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರು. ದಾವಣಗೆರೆ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.ದಾವಣಗೆರೆ ಉತ್ತರದಲ್ಲಿ ಕಾಂಗ್ರೆಸ್ ನ ಎಸ್ ಎಸ್ ಮಲ್ಲಿಕಾರ್ಜುನ್,ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ,ಹೊನ್ನಾಳಿಯಲ್ಲಿ ಕಾಂಗ್ರೆಸ್ ನ ಡಿ.ಜಿ ಶಾಂತಕುಮಾರ್, ಮಾಯಕೊಂಡದಲ್ಲಿ ಕೆ.ಎಸ್ ಬಸವಂತಪ್ಪ, ಚನ್ನಗಿರಿಯಲ್ಲಿ ಕಾಂಗ್ರೆಸ್ ನ ಶಿವಗಂಗಾ ಬಸವರಾಜ್ ಗೆಲುವಿನ ನಗೆ ಬೀರಿದ್ದು ಹರಿಹರದಲ್ಲಿ ಬಿಜೆಪಿಯ ಬಿ.ಪಿ.ಹರೀಶ್ ವಿಜಯಿಯಾಗಿದ್ದಾರೆ.ದಾವಣಗೆರೆ ಜಿಲ್ಲೆಯ ಬಹುತೇಕ ಕ್ಷೇತ್ರದಲ್ಲಿ ಕೈ ಮೇಲಾಗಿದ್ದು ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ,ಚನ್ನಗಿರಿ ಹಾಗೂ ಹೊನ್ನಾಳಿ,ಮಾಯಕೊಂಡ ಕ್ಷೇತ್ರದಲ್ಲಿ ಮೊದಲಸುತ್ತಿನಿಂದಲೂ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನೆಡೆ ಕಾಯ್ದುಕೊಂಡಿದ್ದರು.ಉಳಿದಂತೆ ಹರಿಹರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಪಡೆದಿದ್ದಾರೆ. .
ಬಾಕ್ಸ್ದಾ ವಣಗೆರೆ ಉತ್ತರದಲ್ಲಿ ಕೈ ಮೇಲುಗೈ
ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ನ ಎಸ್ ಎಸ್ ಮಲ್ಲಿಕಾರ್ಜುನ್ 8494 ಮತ ಪಡೆದಿದ್ದಾರೆ.ಬಿಜೆಪಿಯ ಲೋಕಿಕೆರೆ ನಾಗರಾಜ್ ಅವರು ಮೊದಲ ಸುತ್ತಿನಲ್ಲಿ 3117 ಮತ ಪಡೆದಿದ್ದು ಜೆಡಿಎಸ್ ಪಕ್ಷದ ಬಾತಿ ಶಂಕರ್ 132 ಮತ ಪಡೆದಿದ್ದಾರೆ. ಆಮ್ ಆದ್ಮಿ ಪಕ್ಷದ ಶ್ರೀಧರ್ ಪಾಟೀಲ್ 61 ಮತಪಡೆದಿದ್ದಾರೆ.ಮೊದಲ ಸುತ್ತಿನಲ್ಲಿ 8494 ಮತಗಳಿಂದ ಕಾಂಗ್ರೆಸ್ ನ ಎಸ್ .ಎಸ್ ಮಲ್ಲಿಕಾರ್ಜುನ್ ಮುಂದಿದ್ದರು. ಮೊದಲ ಸುತ್ತಿನಲ್ಲಿ ನೊಟಾಗೆ 58 ಮತ ಲಭಿಸಿದೆ.ಎರಡನೇ ಸುತ್ತಿನಲ್ಲಿ ಎಸ್ ಎಸ್ ಮಲ್ಲಿಕಾರ್ಜುನ 16,449 ಮತ ಪಡೆದಿದ್ದಾರೆ.ಬಿಜೆಪಿಯ ಲೋಕಿಕೆರೆ ನಾಗರಾಜ್ 6042 ಮತ ಪಡೆದಿದ್ದು ಎಸ್ ಎಸ್ ಮಲ್ಲಿಕಾರ್ಜುನ್ 10, 047 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.ಮೂರರಿಂದ 14 ನೇ ಸುತ್ತಿನ ಮುಕ್ತಾಯಕ್ಕೆ 26,493 ಮತದೊಂದಿಗೆ ಕಾಂಗ್ರೆಸ್ ನ ಎಸ್ ಎಸ್ ಮಲ್ಲಿಕಾರ್ಜುನ್ ಮುನ್ನೆಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.ಅಂತಿಮವಾಗಿ ೧೭ ಸುತ್ತುಗಳು ಮುಗಿದ ನಂತರ ಕಾಂಗ್ರೆಸ್ ನ ಅಭ್ಯರ್ಥಿ ಎಸ್ ಎಸ್ ಮಲ್ಲಿಕಾರ್ಜುನ ಗೆಲುವು ಪಡೆದಿದ್ದಾರೆ.
ಬಾಕ್ಸ್ -೨ ದಾವಣಗೆರೆ ದಕ್ಷಿಣ ಉಳಿಸಿಕೊಂಡ ಎಸ್ ಎಸ್
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮೊದಲ ಎರಡು ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದರು ಆದರೆ ಮೂರನೇ ಸುತ್ತಿನಿಂದ ೯ ನೇ ಸುತ್ತಿನವರೆಗೂ ಶಾಮನೂರು ಶಿವಶಂಕರಪ್ಪ ಅವರು ಮುನ್ನಡೆ ಕಾಯ್ದುಕೊಂಡಿದ್ದರು ಒಂಭತ್ತು ಮುಕ್ತಾಕ್ಕೆ 22782 ಮತ ಅಂತರದಲ್ಲಿ ಮುಂದಿದ್ದರು.11 ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ 23,694 ಮತ ಪಡೆದು ಮುನ್ನಡೆಯಲ್ಲಿದ್ದರು. ಅಂತಿಮವಾಗಿ ನಡೆದ ೧೫ ನೇ ಸುತ್ತಿನಲ್ಲಿ ಕಾಂಗ್ರೆಸ್ ನ ಶಾಮನೂರು ಶಿವಶಂಕರಪ್ಪ 27,787 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಬಾಕ್ಸ್- ೩ಮಾಯಕೊಂಡದಲ್ಲಿ ಕಾಂಗ್ರೆಸ್ ಗೆ ಜಯ
ಮಾಯಕೊಂಡ ಕ್ಷೇತ್ರದಲ್ಲಿ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ 3953 ಮತ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಪುಷ್ಪ ವಾಗೀಶಸ್ವಾಮಿ 2345 ಮತಪಡೆದಿದ್ದಾರೆ.
ಬಿಜೆಪಿಯ ಬಸವರಾಜನಾಯ್ಕ್ 2201 ಮತಪಡೆದಿದ್ದಾರೆ.ಕಾಂಗ್ರೆಸ್ ನ ಅಭ್ಯರ್ಥಿ1078 ಮತಗಳ ಅಂತರದಿಂದ ಲೀಡ್ ನಲ್ಲಿದ್ದಾರೆ.ನಂತರದಲ್ಲಿ ಎಂಟನೇ ಸುತ್ತಿನವರೆಗೂ ಕಾಂಗ್ರೆಸ್ ಮುನ್ನಡೆಯಲ್ಲಿತ್ತು.ನಂತರ ಮತ ಎಣಿಕೆ ನಡೆದು ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್ ಬಸವಂತಪ್ಪ ಗೆಲುವು ಸಾಧಿಸಿದ್ದಾರೆ.
ಬಾಕ್ಸ್- ೪ ಚನ್ನಗಿರಿಯಲ್ಲಿ ಕೈಗೆ ಜನ ಬಲ
ಮತ ಎಣಿಕೆ ಪ್ರಾರಂಭದಲ್ಲಿ ಪಕ್ಷೇತರ ಅಭ್ಯರ್ಥಿ ಮಾಡಾಳು ಮಲ್ಲಿಕಾರ್ಜುನ ಲೀಡ್ ನಲ್ಲಿದ್ದರು ನಂತರ ಆರನೇ ಸುತ್ತಿನ ಮುಕ್ತಾಕ್ಕೆ ಕಾಂಗ್ರೆಸ್ ನ ಅಭ್ಯರ್ಥಿ ಶಿವಗಂಗಾ ಬಸವರಾಜ್ ಮುನ್ನೆಡೆಯಲ್ಲಿದ್ದಾರೆ.12 ನೇ ಸುತ್ತಿನಲ್ಲಿ ಕಾಂಗ್ರೆಸ್ ನ ಶಿವಗಂಗಾ ಬಸವರಾಜ್ ಅವರು 10,531 ಮತಗಳಿಂದ ಮುನ್ನೆಡೆಯಲ್ಲಿದ್ದರು.ನಂತರ ಮತ ಎಣಿಕೆಯಲ್ಲಿ ಶಿವಗಂಗಾ ಬಸವರಾಜ್ ಕಾಂಗ್ರೆಸ್ ಗೆ ಕ್ಷೇತ್ರ ಉಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಕ್ಸ್-೫
ಹರಿಹರದಲ್ಲಿ ಬಿಜೆಪಿಗೆ ಗೆಲುವು
ಹರಿಹರ ಕ್ಷೇತ್ರದಲ್ಲಿ ಮೊದಲ ಸುತ್ತಿನಿಂದಲೂ ಬಿಜೆಪಿ ಅಭ್ಯರ್ಥಿ ಬಿ.ಪಿ ಹರೀಶ್ ಮುನ್ನಡೆ ಕಾಯ್ದುಕೊಂಡಿದ್ದಾರೆ.10 ನೇ ಸುತ್ತಿನಲ್ಲಿ ಬಿಜೆಪಿ 3503 ಮತಗಳಿಂದ ಮುಂದಿದ್ದರು.ಒಟ್ಟಾರೆ ಹರಿಹರ ಕ್ಷೇತ್ರದ 16 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆದಿದ್ದು ಬಿಜೆಪಿಯ ಅಭ್ಯರ್ಥಿ ಬಿ.ಪಿ.ಹರೀಶ್ 3800 ಗೆಲುವು ಸಾಧಿಸಿದ್ದಾರೆ
ಬಾಕ್ಸ್-೬
ಹೊನ್ನಾಳಿಯಲ್ಲಿ ಕೈ ಹಿಡಿದ ಮತದಾರ
ಹೊನ್ನಾಳಿ ಮತಕ್ಷೇತ್ರದಲ್ಲಿ ಮೊದಲ ಸುತ್ತಿನಿಂದಲೂ ಕಾಂಗ್ರೆಸ್ ಅಭ್ಯರ್ಥಿ ಮುನ್ನೆಡೆ ಕಾಯ್ದುಕೊಂಡಿದ್ದರು.ಏಳನೇ ಸುತ್ತಿನಲ್ಲಿ ಕಾಂಗ್ರೆಸ್ 9985 ಮತಪಡೆದು ಮುಂದಿದ್ದರು.೧೨ ಸುತ್ತಿನಲ್ಲಿ 16847 ಮತಗಳಿಂದ ಮುನ್ನೆಡೆಯಲ್ಲಿದ್ದರು. ಮತ ಎಣಿಕೆ ಮುಗಿದ ನಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ. ಶಾಂತನಗೌಡ ಗೆಲುವಿನ ನಗೆ ಬೀರಿದ್ದಾರೆ.ಕಳೆದ ಬಾರಿ ಸೋಲುಕಂಡಿದ್ದ ಶಾಂತಗೌಡ ಈ ಬಾರಿ ತಮ್ಮ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.