ದಾವಣಗೆರೆಯಲ್ಲಿ ಕೈ ಬಲಪಡಿಸಿದ ಮತದಾರ;ತಂದೆ- ಮಗನ ಗೆಲುವು

ದಾವಣಗೆರೆ. ಮೇ.೧೩; ದಾವಣಗೆರೆ ಜಿಲ್ಲೆಯ ಏಳು‌ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಬಹುತೇಕ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ‌ಗೆದ್ದು ಬೀಗಿದ್ದಾರೆ.ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ 28,025 ಮತಗಳ ಅಂತರದಿಂದ ಗೆಲುವು ಪಡೆಯುವ ಮೂಲಕ   ತಮ್ಮ‌ ಸ್ಥಾನವನ್ನು ಮತ್ತೊಮ್ಮೆ ಭದ್ರ ಪಡಿಸಿಕೊಂಡಿದ್ದಾರೆ. ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕ್ಷೇತ್ರದಲ್ಲಿ ಸೋಲು‌ಕಂಡಿದ್ದ ಎಸ್ ಎಸ್ ಮಲ್ಲಿಕಾರ್ಜುನ್ ಈ ಬಾರಿ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಾರೆ. ಈ ಬಾರಿ ತಂದೆ-ಮಗ ಇಬ್ಬರೂ ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಮತ್ತೊಮ್ಮೆ ಕೈ ಬಲಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಉತ್ತರ ಕ್ಷೇತ್ರದಲ್ಲಿ 17 ಸುತ್ತುಗಳಲ್ಲಿ ಮತ ಎಣಿಕೆ ಮುಗಿದಿದೆ. ದಕ್ಷಿಣ ಕ್ಷೇತ್ರದಲ್ಲಿ ಎಸ್ ಎಸ್  83,103 ಮತ ಪಡೆದಿದ್ದಾರೆ.ಬಿಜೆಪಿಯ ಬಿ.ಜೆ ಅಜಯ್ ಕುಮಾರ್  55078 ಮತ ಗಳಿಸಿದ್ದಾರೆ.ಈ ಬಾರಿ ದಾವಣಗೆರೆ ಜನತೆ ಕಾಂಗ್ರೆಸ್ ನ ಕೈ ಬಲಪಡಿಸಿದ್ದಾರೆ.