
ದಾವಣಗೆರೆ.ಏ.೨೬ : ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಅವರ ಪರ ಇಂದು ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಮತಪ್ರಚಾರ ನಡೆಸುವರು.ಇಂದು ಸಂಜೆ 4ರಿಂದ ನಗರದ ನಿಟ್ಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಿಂದ ಪ್ರಾರಂಭಗೊಳ್ಳುವ ಮತಪ್ರಚಾರದಲ್ಲಿ ನಾಗರಾಜ್ ಲೋಕಿಕೆರೆ ಅವರೊಂದಿಗೆ ನಟ ಕಿಚ್ಚ ಸುದೀಪ್ ಸಾಥ್ ನೀಡಿ ಮತಪ್ರಚಾರ ನಡೆಸುವರು.ಶೇಖರಪ್ಪ ಗಾರ್ಮೆಂಟ್ ಹಿಂಭಾಗದಿಂದ ಮಾಳಿಗೆರ ಮನೆ ಮೂಲಕ ಗಣಪತಿ ದೇವಸ್ಥಾನ, ಚೌಡಮ್ಮ ದೇವಸ್ಥಾನ ಮುಖೇನಾ ಹೆಚ್ ಕೆ ಆರ್ ವೃತ್ತದಿಂದ ರಿಂಗ್ ರಸ್ತೆವರೆಗೆ ಮತಪ್ರಚಾರ ನಡೆಯಲಿದೆ. ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನಂತರ ಅಂಬೇಡ್ಕರ್ ಸರ್ಕಲ್ ನಿಂದ ರಾಂ ಅಂಡ್ ಕೋ ಸರ್ಕಲ್ ವರೆಗೆ 24ನೇ ವಾರ್ಡ್ ವ್ಯಾಪ್ತಿಯಲ್ಲಿ ರೋಡ್ ಷೋ ಹಾಗೂ ರಾಂ ಅಂಡ್ ಕೋ ಸರ್ಕಲ್ ನಲ್ಲಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಸರ್ಕಲ್ ನಲ್ಲಿ ಸಭೆ ನಡೆಸುವರು.