ದಾವಣಗೆರೆಯಲ್ಲಿ ಎಬಿವಿಪಿ ಅಭ್ಯಾಸ ವರ್ಗ

ದಾವಣಗೆರೆ. ಡಿ.೨೯;  ಪ್ರತೀ ವರ್ಷದಂತೆ  ಎಬಿವಿಪಿ ನಗರ ಅಭ್ಯಾಸ ವರ್ಗವನ್ನು ನಗರದ ಲಲಿತಕಲಾ ಮಹಾವಿದ್ಯಾಲಯದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾನಗರ ಅಧ್ಯಕ್ಷರಾದ ಪವನ್ ರೇವಣಕರ್ ಎಬಿವಿಪಿ ಸಂಘದ ವಿದ್ಯಾರ್ಥಿಗಳು ದೇಶದ ಆಂತರಿಕ ಸೈನಿಕರಿದ್ದಂತೆ ಇವರು ಕೇವಲ ವಿದ್ಯಾರ್ಥಿ ಸಮಸ್ಯಗಳನ್ನು ಪ್ರತಿ ನಿಧಿಸುವುದಲ್ಲದೇ ರಾಷ್ಟ್ರದ ವಿವಿದ ಕ್ಷೇತ್ರಗಳಲ್ಲೂ ಜಾಗೃತಿಯನ್ನು‌ ಮೂಡಿಸುವ ಮೂಲಕ ದೇಶದಲ್ಲಿರುವ ಆಂತರಿಕ ಶತ್ರುಗಳಿಂದ ಸಮಾಜವನ್ನು ಕಾಪಾಡುತ್ತಾರೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಮೆಡಿಕೋಸ್ ಸಂಘದ ಜಿಲ್ಲಾ‌ ಅಧ್ಯಕ್ಷರು ಹಾಗು ಸ್ತ್ರೀರೋಗ ತಜ್ಞರಾದ  ಡಾ.ಅಶ್ವಿನ್ ಮಾತನಾಡಿ ಎಬಿವಿಪಿ ಸಂಘ ದಶಕಗಳಿಂದ ರಾಷ್ಟ್ರದ ಪುನರ್ ನಿರ್ಮಾಣದಲ್ಲಿ ಸರ್ವೋಪರಿಯಾಗಿ ಶ್ರಮಿಸುತ್ತಿದೆ, ನಮ್ಮ ನಗರದ ಜೆಜೆಎಂ ವೈದ್ಯಕೀಯ ವಿದ್ಯಾರ್ಥಿಗಳಿಗೆ ವರ್ಷಗಳಿಂದ ಸರ್ಕಾರದಿಂದ ವಿದ್ಯಾರ್ಥಿ ವೇತನ ಬಾರದಿದ್ದಾಗ, ಎಬಿವಿಪಿ‌‌ ಅವರ ಬೆಂಬಲಕ್ಕೆ ನಿಂತು ಪ್ರತಿಭಟನೆ ಮಾಡಿ, ಅವರಿಗೆ ಪ್ರಸ್ತುತ ಸ್ಕಾಲರ್ ಶಿಪ್ ದೊರಕುವಂತೆ ಮಾಡಿದೆ ಎಂದು ಶ್ಲಾಘಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು‌ ವಹಿಸಿಕೊಂಡಂತಹ ದಾವಣಗೆರೆ ವಿವಿ ಯ ಕುಲಸಚಿವರಾದ ಡಾ.ಬಸವರಾಜ್ ಬಣಕಾರ್  ಮಾತನಾಡಿ, ಭರತ ರಾಷ್ಟ್ರ ಅನಾದಿ ಕಾಲದಿಂದಲೂ  ಸಂಸ್ಕೃತಿಕ, ಸಾಹಿತ್ಯ ಹಾಗು ವಿಜ್ಞಾನ, ಸಂಪನ್ಮೂದಲ್ಲಿ ಅಪಾರವಾದ ಸಂಪತ್ತನ್ನು ಹೊಂದಿರುವ ರಾಷ್ಟ್ರ, ರಾಷ್ಟ್ರದ ಋಷಿಗಳು, ಬಸವಣ್ಣ ರಂತಹ ಸಂತರು ಸಾವಿರ ವರ್ಷದ ಹಿಂದೆಯೇ ಅನುಭವ ಮಂಟಪವನ್ನು ಸ್ಥಾಪಿಸಿ ವಿಶ್ವಕ್ಕೆ ಮಾದರಿಯಾಗಿದ್ದರು, ಆದ್ದರಿಂದ ವಿದ್ಯಾರ್ಥಿಗಳ ರಾಷ್ಟ್ರದ ಈ ಒಂದು ಅಪಾರವಾದ ಜ್ಞಾನ ಸಂಪತ್ತನ್ನು ಕಲಿಯಬೇಕು ರಾಷ್ಟ್ರದ ಉನ್ನತಿಗಾಗಿ ಶ್ರಮಿಸಬೇಕೆಂದು ಆಶಿಸಿದರು. ಇದೇ ಸಂದರ್ಭದಲ್ಲಿ ನಗರ ಸ್ಥರದ ಜವಾಬ್ದಾರಿಗಳನ್ನು ಘೋಷಣೆ ಮಾಡಲಾಯಿತು.ನಗರ ಅಧ್ಯಕ್ಷರಾಗಿ‌ ಮುರೂ ಆಯ್ಕೆಯಾದ ಪವನ್ ರೇವಣರ್, ನಗರ ಕಾರ್ಯದರ್ಶಿ ಭಾರ್ಗವ್, ಸಹ ಕಾರ್ಯದರ್ಶಿ ಕೊಷ್ಟೇಶ್, ನಗರ ವಿದ್ಯಾರ್ಥಿ ಪ್ರಮುಖ್ ಮಾನಸ, ನಗರ ವಿದ್ಯಾರ್ಥಿ ಸಹ ಪ್ರಮುಖ್ ಪ್ರಭಾವಳಿ, ನಗರ ಹಾಸ್ಟಲ್ ಪ್ರಮುಖ್ ರವಿ, ನಗರ ಎಸ್.ಎಫ್.ಡಿ ಪ್ರಮುಖ್ ರವಿ, ನಗರ ಅಧ್ಯಾಯನ ವೃತ್ತ ಪ್ರಮುಖ್ ರವಿ, ನಗರ ಸಂಪರ್ಕ ಪ್ರಮುಖ್ ದೊಡ್ಡೇಶ್, ನಗರ ಸಾಮಾಜಿಕ ಜಾಲತಾಣ ಪ್ರಮುಖ್ ನಿತೀಶ್, ನಗರ ಹೋರಾಟ ಪ್ರಮುಖ್ ವಿಜಯ್, ನಗರ ಜಿಗ್ನಾಸಾ ಪ್ರಮುಖ್ ಅಂಬರೀಶ್, ನಗರ ಕಾರ್ಯಕಾರಿಣಿ ಸದಸ್ಯರಾಗಿ ಹೇಮಂತ, ಚರಣ್, ಲಕ್ಷ್ಮೀ, ಕೊಟ್ರೇಶ್, ಅಭಿಷೇಕ್, ಮನೋಜ್ ನೇಮಕವಾದರು.